ನವದೆಹಲಿ: ದ್ವಿಚಕ್ರವಾಹನ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ರೂಪಿಸಿದ್ದು, ಮೋಟಾರು ವಾಹನ ಕಾಯ್ದೆಗೆ ಕೆಲವೊಂದು ತಿದ್ದುಪಡಿ ಮಾಡಲಾಗಿದೆ.
ಹೆಲ್ಮೆಟ್ ಧರಿಸಿದ್ದರೆ, ಬೆಲ್ಟ್ ಹಾಕದಿದ್ದರೆ ಮತ್ತು ಐಎಸ್ಐ ಮಾನ್ಯತೆ ಇರುವ ಹೆಲ್ಮೆಟ್ ಧರಿಸದಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುವುದು. ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸುವ ಜೊತೆಗೆ ಬೆಲ್ಟ್ ಕೂಡ ಹಾಕಬೇಕಿದೆ. ಇಲ್ಲದಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಹೊಸ ನಿಯಮಗಳ ಪ್ರಕಾರ, ಮಿತಿಮೀರಿದ ಲಗೇಜು ಹಾಕಿದಲ್ಲಿ 20,000 ರೂ., ಆಂಬುಲೆನ್ಸ್ ಗೆ ಅಡ್ಡಿಪಡಿಸಿದಲ್ಲಿ 10,000 ರೂ., ಸಿಗ್ನಲ್ ಜಂಪ್ ಮಾಡಿದರೆ 2000 ರೂ., ಐಎಸ್ಐ ಮಾನ್ಯತೆ ಇಲ್ಲದ ಹೆಲ್ಮೆಟ್ ಧರಿಸಿದ್ದರೆ 1000 ರೂ. ಮತ್ತು ಹೆಲ್ಮೆಟ್ ಬೆಲ್ಟ್ ಹಾಕದಿದ್ದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.