ಬೆಂಗಳೂರು: ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ದಂಡದ ಮೊತ್ತವನ್ನು ಹೆಚ್ಚಿಸಿದ ಬೆನ್ನಲ್ಲೇ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಹಾಫ್ ಹೆಲ್ಮಟ್ ಧರಿಸಿದರವರಿಗೆ 500 ರೂ. ದಂಡ ಹಾಕಲಾಗುವುದು.
ಅರ್ಧ ಮತ್ತು ಐಎಸ್ಐ ಮುದ್ರೆ ಇಲ್ಲದ ಕಳಪೆ ಹೆಲ್ಮೆಟ್ ಗಳನ್ನು ಧರಿಸಿದಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ. ದ್ವಿಚಕ್ರವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲಾಗುವುದು.
ಮೊದಲ ಹಂತದಲ್ಲಿ ಪೊಲೀಸ್ ಇಲಾಖೆಯಲ್ಲಿಯೇ ಕಳಪೆ ಹೆಲ್ಮೆಟ್ ನಿಷೇಧ ನಿಯಮ ಜಾರಿಗೊಳಿಸಲಾಗುತ್ತಿದೆ. 140 ಪೊಲೀಸರಿಗೆ ದಂಡ ವಿಧಿಸಲಾಗಿದೆ. ನಂತರದಲ್ಲಿ ಸಾರ್ವಜನಿಕರಿಗೆ ದಂಡ ವಿಧಿಸಲಾಗುವುದು. ಹಾಫ್ ಹೆಲ್ಮೆಟ್ ಧರಿಸುವಂತಿಲ್ಲ. ಗುಣಮಟ್ಟದ ಹೆಲ್ಮೆಟ್ ಧರಿಸಬೇಕಿದೆ ಎಂದು ಹೇಳಲಾಗಿದೆ.