ಅಮೆರಿಕ ಅವಕಾಶಗಳ ನಾಡು. ಕೌಶಲ್ಯವೊಂದಿದ್ದರೆ ಯಾರು ಬೇಕಾದರು ಇಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಹೇಳಲಾಗುತ್ತಿತ್ತು. ಈ ಅವಕಾಶವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತಿದ್ದ ಎಚ್1ಬಿ ವೀಸಾಕ್ಕೆ ಸದ್ಯ ಟ್ರಂಪ್ ಅಡ್ಡಗಾಲು ಹಾಕಿದ್ದಾರೆ. ಆದರೆ ಈ ತಾತ್ಕಾಲಿಕ ವೀಸಾದಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ.
ಹೌದು, ಎಚ್1ಬಿ ವೀಸಾಗಳ ಬದಲು ಮೆರಿಟ್ ಆಧಾರದಲ್ಲಿ ವೀಸಾ ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದರಿಂದ ಮುಂದಿನ ಆರು ತಿಂಗಳು ಅಮೆರಿಕ ವೀಸಾ ಅನೇಕರಿಗೆ ದಕ್ಕುವುದಿಲ್ಲ.ಇದರಿಂದ ಅನೇಕ ವಲಸಿಗರಿಗೆ ಸಮಸ್ಯೆಯಾಗಲಿದೆ.
ಇದೀಗ ಕೆಲ ಪರಿಷ್ಕೃತ ನಿಯಮದನ್ವಯ ಸಂಶೋಧಕರಿಗೆ, ಹೆಚ್ಚು ವೇತನ ಪಡೆಯುತ್ತಿರುವವರಿಗೆ ಹಾಗೂ ಮಾಡೆಲಿಂಗ್ ಕ್ಷೇತ್ರದವರಿಗೆ ವೀಸಾ ಸಿಗಬಹುದು ಎನ್ನಲಾಗಿದೆ.
ಆದರೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಎಚ್1ಬಿ ವೀಸಾದ ಮೇಲೆ ಅಮೆರಿಕದಲ್ಲಿ ನೆಲೆಸಿರುವ ಪಟ್ಟಿ ಸಣ್ಣದಾಗಿಲ್ಲ. ಗೂಗಲ್ ಸಿಇಒ ಸುಂದರ್ ಪಿಚ್ಚೈ , ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ, ಪೆಪ್ಸಿಕೋ ಸಂಸ್ಥೆಯ ಮಾಜಿ ಸಿಇಒ ಇಂದ್ರಾ ನೂಯಿ, ಅಡೋಬ್ ಸಿಇಒ ಸತ್ಯನ್ ನಾರಾಯಣ್, ಮಾಸ್ಟರ್ ಕಾರ್ಡ್ ಸಿಇಒ ಅಜಯ್‌ಪಾಲ್ ಸಿಂಗ್ ಬಾಂಗ ಹಾಗೂ ಸ್ವತಃ ಡೊನಾಲ್ಡ್ ಟ್ರಂಪ್ ಪತ್ನಿ ಹಾಗೂ ಆಕೆಯ ಪೋಷಕರು ತಾತ್ಕಾಲಿಕ ವೀಸಾದಲ್ಲಿ ಅಮೆರಿಕ ಪ್ರವೇಶಿಸಿದ್ದರು.