ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಖುಷಿ ಸುದ್ದಿ ನೀಡಿದೆ. ವಿಶೇಷ ಸ್ಥಿರ ಠೇವಣಿ ಯೋಜನೆಯ ದಿನಾಂಕವನ್ನು ಬ್ಯಾಂಕ್ ಮತ್ತೊಮ್ಮೆ ವಿಸ್ತರಿಸಿದೆ. ಹಿರಿಯ ನಾಗರಿಕರಿಗಾಗಿ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆಯನ್ನು ನೀಡ್ತಿದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ದರದಲ್ಲಿ ಬ್ಯಾಂಕುಗಳು ಬಡ್ಡಿಯನ್ನು ನೀಡುತ್ತವೆ. ಈ ಸೌಲಭ್ಯವನ್ನು ಬ್ಯಾಂಕ್ ಮೇ. 18, 2020 ರಂದು ಪ್ರಾರಂಭಿಸಿತ್ತು. ಮಾರ್ಚ್ 31ಕ್ಕೆ ಈ ಯೋಜನೆ ಕೊನೆಗೊಳ್ಳಬೇಕಿತ್ತು. ಆದ್ರೆ ಜೂನ್ 20, 2021ರ ವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಈ ಠೇವಣಿಗಳ ಮೇಲೆ 75 ಬೇಸಿಸ್ ಪಾಯಿಂಟ್‌ಗಳಿಗೆ ಹೆಚ್ಚಿನ ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರು ಎಚ್‌ಡಿಎಫ್‌ಸಿ ಬ್ಯಾಂಕಿನ ಈ ಯೋಜನೆಯಲ್ಲಿ ಠೇವಣಿ ಮಾಡಿದರೆ, ಬ್ಯಾಂಕ್ ಶೇಕಡಾ 6.25ರ ದರದಲ್ಲಿ ಬಡ್ಡಿ ನೀಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳಿಂದ 29 ದಿನಗಳ ನಡುವಿನ ಠೇವಣಿಗಳ ಮೇಲೆ ಶೇಕಡಾ 2.50 ಬಡ್ಡಿ ಮತ್ತು 30-90 ದಿನಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 3ರಷ್ಟು ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ 91 ದಿನಗಳಿಂದ 6 ತಿಂಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 3.5 ಬಡ್ಡಿಯನ್ನು ನೀಡಲಾಗುತ್ತದೆ.