ಎಚ್ ಡಿ ಎಫ್ ಸಿ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಇಂದೇ ಮುಗಿಸಿ. ನಾಳೆ ಅಂದ್ರೆ ಮೇ.8ರಂದು ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆ ಅಲಭ್ಯವಾಗಲಿದೆ. ಈ ಬಗ್ಗೆ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ನೀಡಿದೆ.
ಶುಕ್ರವಾರ ರಾತ್ರಿಯಿಂದಲೇ ನೆಟ್‌ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಕೆಲವು ನಿಗದಿತ ನಿರ್ವಹಣಾ ಚಟುವಟಿಕೆಗಳಿಂದಾಗಿ, ಮೇ 8 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ನೆಟ್‌ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಸೇವೆಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ಟ್ವೀಟ್ ಮಾಡಿದೆ. ಮೆಂಟೆನೆನ್ಸ್ ಕೆಲಸಕ್ಕಾಗಿ ಬ್ಯಾಂಕಿನ ಕೆಲವು ಸೇವೆಗಳನ್ನು ಮುಚ್ಚಲಾಗುವುದು ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. ಮೇ 7 ರಂದು ರಾತ್ರಿ 10.15 ಕ್ಕೆ ಮತ್ತು ಮೇ 8 ರಂದು ಬೆಳಿಗ್ಗೆ 1.45 ಕ್ಕೆ ಮೆಂಟೆನೆನ್ಸ್ ಕೆಲಸ ನಡೆಯಲಿದೆ. ಎಸ್‌ಬಿಐ ಗ್ರಾಹಕರು ಐಎನ್‌ಬಿ, ಯೋನೊ, ಯೋನೊ ಲೈಟ್, ಯುಪಿಐ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ.