
ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ ಸಾಲದ ದರವನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ. ಹೊಸ ದರಗಳು ಶುಕ್ರವಾರ ಅಂದರೆ ಆಗಸ್ಟ್ 7 ರಿಂದ ಜಾರಿಗೆ ಬಂದಿವೆ.
ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳ ಇಎಂಐ ಶೇಕಡಾ 0.10 ರಷ್ಟು ಕಡಿಮೆಯಾಗಲಿದೆ. ಆಗಸ್ಟ್ 4 ರ ಮಂಗಳವಾರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿದರಗಳನ್ನು ಕಡಿಮೆ ಮಾಡಿ ಆದೇಶ ನೀಡಿತ್ತು. ಯುಬಿಐ ಸಂಬಳ ಪಡೆಯುವ ವರ್ಗದ ಗೃಹ ಸಾಲ ದರವನ್ನು ಶೇಕಡಾ 6.7 ಕ್ಕೆ ಇಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರ ಸದ್ಯ ಶೇಕಡಾ 4 ರಷ್ಟಿದೆ.