ಮುಂಬೈ: ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ 9000 ನೇಮಕ ಮಾಡಿಕೊಳ್ಳಲು ಹೆಚ್.ಸಿ.ಎಲ್. ಟೆಕ್ನಾಲಜೀಸ್ ಯೋಜನೆ ರೂಪಿಸಿದೆ.
ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ 9000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಯೋಜಿಸಲಾಗಿದೆ. 2020 ರ ಸೆಪ್ಟಂಬರ್ ತ್ರೈಮಾಸಿಕದ ಅಂತ್ಯಕ್ಕೆ ಹೆಚ್.ಸಿಎಲ್. ಟೆಕ್ನಾಲಜೀಸ್ 1:53,085 ಉದ್ಯೋಗಿಗಳನ್ನು ಹೊಂದಿದೆ.
ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಸೆಪ್ಟಂಬರ್ ತ್ರೈಮಾಸಿಕದಲ್ಲಿ ಕಂಪನಿ 1500ಕ್ಕೂ ಹೆಚ್ಚು ಫ್ರೆಶರ್ ಗಳನ್ನು ನೇಮಕ ಮಾಡಿಕೊಂಡಿದೆ. ಇದರೊಂದಿಗೆ ಉದ್ಯೋಗಿಗಳ ವೇತನ ಹೆಚ್ಚಳ ಮಾಡಲಾಗುವುದು. ಕಳೆದ ವರ್ಷ ಭಾರತದ ಸಿಬ್ಬಂದಿಗೆ ಶೇಕಡ 6 ರಷ್ಟು, ಸಾಗರೋತ್ತರ ಸಿಬ್ಬಂದಿಗೆ ಶೇಕಡ 2.5 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು ಎಂದು ಹೇಳಲಾಗಿದೆ.