ದೇಶದ ದೈತ್ಯ ಟೆಕ್ ಕಂಪನಿ ಎಚ್‌ಸಿಎಲ್ ಟೆಕ್ನಾಲಜೀಸ್ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಕಂಪನಿ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ. ಸೋಮವಾರ 10 ಬಿಲಿಯನ್ ಯುಎಸ್ ಡಾಲರ್ (ಸುಮಾರು 72,800 ಕೋಟಿ ರೂ.) ಆದಾಯವನ್ನು ಗಳಿಸಿದ ಕಂಪನಿ ತನ್ನ ಉದ್ಯೋಗಿಗಳಿಗೆ 700 ಕೋಟಿ ರೂಪಾಯಿಗಳ ವಿಶೇಷ ಬೋನಸ್ ಘೋಷಿಸಿದೆ.
ಸುದ್ದಿ ಪ್ರಕಾರ, ಫೆಬ್ರವರಿ 2021 ರಲ್ಲಿ ಉದ್ಯೋಗಿಗಳಿಗೆ ವಿಶೇಷ ಬೋನಸ್ ನೀಡಲಾಗುವುದು ಎಂದು ಕಂಪನಿ ಹೇಳಿದೆ. ವಿಶ್ವದಾದ್ಯಂತ ತನ್ನ ಉದ್ಯೋಗಿಗಳಿಗೆ ಒಂದು ಬಾರಿ ವಿಶೇಷ ಬೋನಸ್ ನೀಡಲಾಗುತ್ತಿದೆ. ಇದು ಒಟ್ಟು 700 ಕೋಟಿ ರೂಪಾಯಿಯಾಗಿರಲಿದೆ ಎಂದು ಕಂಪನಿ ಹೇಳಿದೆ. ಈ ಸಂದರ್ಭದಲ್ಲಿ, ಒಂದು ವರ್ಷ ಅಥವಾ ಹೆಚ್ಚಿನ ಸೇವೆಯನ್ನು ಹೊಂದಿರುವ ಎಲ್ಲಾ ಉದ್ಯೋಗಿಗಳಿಗೆ ಹತ್ತು ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಸಿಗಲಿದೆ.
ಸಾಂಕ್ರಾಮಿಕ ರೋಗದ ಹೊರತಾಗಿಯೂ, ಎಚ್‌ಸಿಎಲ್ ನ ಪ್ರತಿಯೊಬ್ಬ ನೌಕರರು ಬದ್ಧತೆ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ್ದಾರೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಅಪ್ಪರಾವ್ ಹೇಳಿದ್ದಾರೆ. ಡಿಸೆಂಬರ್ 31,2020 ರ ಹೊತ್ತಿಗೆ ಎಚ್‌ಸಿಎಲ್‌ನಲ್ಲಿ 159682 ಉದ್ಯೋಗಿಗಳು ಕೆಲಸ ಮಾಡ್ತಿದ್ದಾರೆ.
2020 ರಲ್ಲಿ ಕಂಪನಿ ಆದಾಯ 10 ಅರಬ್ ಡಾಲರ್ ದಾಟಿದೆ. ಈ ಮೂಲಕ ಕಂಪನಿ ಶೇಕಡಾ 3.6 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.