ಕೊರೊನಾ ಸೋಂಕು ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಅನಿವಾರ್ಯವಾಗಿದೆ. ಸೋಂಕು ತಡೆಯಲು ನೆರವಾಗುವ ಹ್ಯಾಂಡ್ ಸ್ಯಾನಿಟೈಜರ್ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹ್ಯಾಂಡ್ ಸ್ಯಾನಿಟೈಜರ್ ಮಾರಾಟಕ್ಕೆ ಕಡ್ಡಾಯವಾಗಿದ್ದ ಪರವಾನಗಿ ನಿಯಮವನ್ನು ಸಡಿಲಗೊಳಿಸಿದೆ.
ಇನ್ಮುಂದೆ ದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ತೊಂದರೆಯಿಲ್ಲದೆ ಸ್ಯಾನಿಟೈಜರ್ ಮಾರಾಟ ಮಾಡಬಹುದು. ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಈ ವಿನಾಯಿತಿಯನ್ನು ನೀಡಿದೆ.
ದೇಶದಲ್ಲಿ ಸ್ಯಾನಿಟೈಜರ್ ಕಳ್ಳಸಾಗಣೆ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಗೆ ಬೇಡಿಕೆ ಹೆಚ್ಚಾದಂತೆ ಬೆಲೆ ಕೂಡ ಹೆಚ್ಚಾಗಿದೆ. ಜನರಿಗೆ ಸರಿಯಾದ ಪ್ರಮಾಣದಲ್ಲಿ ಸ್ಯಾನಿಟೈಜರ್ ಸಿಗಲಿ ಎನ್ನವ ಕಾರಣಕ್ಕೆ ಸರ್ಕಾರ ಈಗ ಪರವಾನಗಿ ನಿಯಮವನ್ನು ಸಡಿಲಗೊಳಿಸಿದೆ.