ಮುಂದಿನ ತಿಂಗಳು ಅಂದ್ರೆ ಜೂನ್ 1 ರಿಂದ ಚಿನ್ನದ ಆಭರಣಗಳ ಮಾರಾಟದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹಾಲ್ಮಾರ್ಕಿಂಗ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಚಿನ್ನದ ಆಭರಣದಲ್ಲಾಗ್ತಿರುವ ಮೋಸ ತಪ್ಪಿಸಲು ಹಾಲ್ಮಾರ್ಕಿಂಗ್ ಕಡ್ಡಾಯ ಮಾಡಲಾಗ್ತಿದೆ.
ಹಾಲ್ಮಾರ್ಕಿಂಗ್ ನಿಯಮಗಳು ಜೂನ್ 1 ರಿಂದ ಜಾರಿಗೆ ಬರಲಿವೆ. ಕೇವಲ 22 ಕ್ಯಾರೆಟ್, 18 ಕ್ಯಾರೆಟ್, 14 ಕ್ಯಾರೆಟ್ ಆಭರಣಗಳು ಮಾರಾಟವಾಗಲಿವೆ. ಹಾಲ್ಮಾರ್ಕಿಂಗ್ ನಲ್ಲಿ ಬಿಐಎಸ್ ಸೀಲ್, ಕ್ಯಾರೆಟ್ ಮಾಹಿತಿ ಇರುತ್ತದೆ. ಆಭರಣವನ್ನು ತಯಾರಿಸಿದಾಗ, ಅದರ ವರ್ಷ, ಆಭರಣಕಾರರ ಹೆಸರನ್ನು ನಮೂದಿಸಬೇಕು. ಹಾಲ್ಮಾರ್ಕಿಂಗ್ ಚಿನ್ನದ ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.
ಮನೆಯಲ್ಲಿ ಇರಿಸಿರುವ ಹಳೆಯ ಆಭರಣಗಳಿಗೂ ಹಾಲ್ಮಾರ್ಕಿಂಗ್ ಮಾಡಬಹುದು. ಯಾವುದೇ ಹಾಲ್ಮಾರ್ಕ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹಾಲ್ಮಾರ್ಕಿಂಗ್ ಮಾಡಬಹುದು. ಹಳೆಯ ಆಭರಣಗಳ ಹಾಲ್ಮಾರ್ಕಿಂಗ್ ಶುಲ್ಕ ಸ್ವಲ್ಪ ಹೆಚ್ಚಿರುತ್ತದೆ. ಹಾಲ್ಮಾರ್ಕಿಂಗ್ ಇಲ್ಲದೆ ಹಳೆ ಆಭರಣಗಳನ್ನು ಮಾರಾಟ ಮಾಡುವುದು ಕಷ್ಟ. ಹಾಲ್ಮಾರ್ಕಿಂಗ್ ಇಲ್ಲದ ಆಭರಣಗಳ ಬೆಲೆ ಕಡಿಮೆ ಇರುತ್ತದೆ.
ಹಾಲ್ಮಾರ್ಕಿಂಗ್ ಇಲ್ಲದ ಆಭರಣ ಮಾರಾಟಗಾರರಿಗೆ ಒಂದು ಲಕ್ಷದಿಂದ ಇದ್ರ ಐದು ಪಟ್ಟು ದಂಡ ವಿಧಿಸಲಾಗುವುದು. ಒಂದು ವರ್ಷ ಜೈಲು ಶಿಕ್ಷೆಯಾಗಲಿದೆ. ಮೋಸ ಕಂಡು ಹಿಡಿಯಲು ಸರ್ಕಾರ ಬಿಐಎಸ್-ಕೇರ್ ಎಂಬ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.