alex Certify ಕುರ್ತಾದಿಂದ ಪ್ರೇರಣೆ ಪಡೆದು ವಿನ್ಯಾಸಗೊಳಿಸಿದ ಗುಚ್ಚಿಯ ಈ ಡ್ರೆಸ್‌ ಬೆಲೆ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರ್ತಾದಿಂದ ಪ್ರೇರಣೆ ಪಡೆದು ವಿನ್ಯಾಸಗೊಳಿಸಿದ ಗುಚ್ಚಿಯ ಈ ಡ್ರೆಸ್‌ ಬೆಲೆ ಎಷ್ಟು ಗೊತ್ತಾ….?

ಐಷಾರಾಮಿ ಉಡುಪುಗಳ ಬ್ರಾಂಡ್ ಗುಚ್ಚಿ ಭಾರತೀಯ ವಸ್ತ್ರವಿನ್ಯಾಸದಿಂದ ಪ್ರೇರಣೆ ಪಡೆದಂತೆ ಕಾಣುತ್ತಿದ್ದು, ’ಫ್ಲೋರಲ್ ಕಫ್ತನ್’ ಹೆಸರಿನ ವಿನ್ಯಾಸದ ಬಿಳಿ ಬಣ್ಣದ ಕುರ್ತಾ ಒಂದನ್ನು ಹೊರತಂದಿದೆ.

ಬಣ್ಣಬಣ್ಣದ ಹೂವುಗಳ ಅಲಂಕಾರ ಹೊಂದಿರುವ ಈ ವಿನ್ಯಾಸದ ಕುರ್ತಾದ ಬೆಲೆ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಕಾಶ್ಮೀರದ ’ಫಿರನ್’ ಕೋಟ್‌ನ ಕಾಲರ್‌ ಸುತ್ತ ಮಾಡುವ ವಿನ್ಯಾಸವನ್ನು ಹೋಲುವ ಪುಷ್ಪಾಲಂಕಾರ ವಿನ್ಯಾಸ ಹೊಂದಿರುವ ಈ ಕುರ್ತಾದ ಬೆಲೆಯು $3,500 (2.5 ಲಕ್ಷ ರೂ.ಗಳು) ಆಗುತ್ತದೆ.

“ಭಾರತೀಯ ಕುರ್ತಾವೊಂದನ್ನು ಗುಚ್ಚಿ 2.5 ಲಕ್ಷ ರೂ.ಗೆ ಮಾರುತ್ತಿದೆಯೇ? ನಾನು ಇದನ್ನು 500 ರೂಪಾಯಿಗೆ ಖರೀದಿಸಬಲ್ಲೆ” ಎಂದು ವಿನೋದಮಯ ಕ್ಯಾಪ್ಷನ್ ಒಂದನ್ನು ಹಾಕಿ ಟ್ವಿಟರ್‌ ಬಳಕೆದಾರರೊಬ್ಬರು ಈ ಚಿತ್ರವನ್ನು ಶೇರ್‌ ಮಾಡಿದ್ದಾರೆ.

ಬ್ರಾಂಡೆಡ್ ಎಂಬ ಕಾರಣದಕ್ಕೆ ಎಷ್ಟಾದರೂ ಕೊಟ್ಟು ಏನನ್ನು ಬೇಕಾದರೂ ಜನ ಖರೀದಿ ಮಾಡುತ್ತಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...