ಚೆನ್ನೈ: ಗಿಫ್ಟ್ ವೋಚರ್ ಅಥವಾ ಕಾರ್ಡುಗಳಿಗೆ ಕೂಡ ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗುತ್ತದೆ ಎಂದು ತಮಿಳುನಾಡಿನ ಅಡ್ವಾನ್ಸ್ ರೂಗ್ ಮೇಲ್ಮನವಿ ಪ್ರಾಧಿಕಾರ ತೀರ್ಪು ನೀಡಿದೆ.
ಇದು ಪೂರೈಕೆ ಸಮಯದಲ್ಲಿ ಆಗದೆ ಗಿಫ್ಟ್ ಕಾರ್ಡ್ ಖರೀದಿಸುವ ಹಂತದಲ್ಲಿ ಅಷ್ಟೇ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ಗಿಫ್ಟ್ ಕಾರ್ಡ್ ಮತ್ತು ವೋಚರ್ ಗಳಿಗೆ ಜಿಎಸ್ಟಿ ಅನ್ವಯವಾಗುವ ಕುರಿತ ಗೊಂದಲಗಳಿಗೆ ಅಡ್ವಾನ್ಸ್ ರೂಲಿಂಗ್ ಮೇಲ್ಮನವಿ ಪ್ರಾಧಿಕಾರ ತೆರೆ ಎಳೆದಿದೆ.
ಕಲ್ಯಾಣ್ ಜುವೆಲರ್ಸ್ ತಮಿಳುನಾಡಿನ ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರದ ಮೊರೆ ಹೋಗಿತ್ತು. ಗಿಫ್ಟ್ ಕಾರ್ಡ್ ಯಾವ ರೀತಿಯದ್ದು ಎನ್ನುವುದನ್ನು ಆಧರಿಸಿ ಶೇಕಡ 12 ಅಥವಾ ಶೇಕಡ 18 ರಷ್ಟು ಜಿಎಸ್ಟಿ ವಿಧಿಸಬಹುದಾಗಿದೆ ಎಂದು ಮೇಲ್ಮನವಿ ಪ್ರಾಧಿಕಾರ ಈ ಕುರಿತಾದ ಮೇಲ್ಮನವಿ ತೀರ್ಪನ್ನು ಮಾರ್ಪಡಿಸಿ ತೀರ್ಪು ನೀಡಿದೆ ಎಂದು ಹೇಳಲಾಗಿದೆ.