alex Certify GST ವಿನಾಯಿತಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ವಿನಾಯಿತಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಾಕ್ಡೌನ್ ನಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿ ಸಂಕಷ್ಟದಲ್ಲಿರುವ ಉದ್ಯಮಿಗಳು ವ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ವಾರ್ಷಿಕ 40 ಲಕ್ಷ ರೂಪಾಯಿವರೆಗೂ ಜಿಎಸ್ಟಿ ವಿನಾಯಿತಿ ನೀಡಲಾಗಿದ್ದು ಈ ಮೂಲಕ ಸಂಕಷ್ಟದಲ್ಲಿರುವ ಉದ್ಯಮಿಗಳು, ವ್ಯಾಪಾರಿಗಳಿಗೆ ಕೊಡುಗೆ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ವಾರ್ಷಿಕವಾಗಿ 1.5 ಕೋಟಿ ರೂಪಾಯಿಯಷ್ಟು ವ್ಯಾಪಾರ ವಹಿವಾಟು ಹೊಂದಿದವರು ಶೇಕಡ 1 ರಷ್ಟು ಜಿಎಸ್ಟಿ ಪಾವತಿಸಬಹುದಾಗಿದೆ.

ಈ ಹಿಂದೆ ವಾರ್ಷಿಕ 20 ಲಕ್ಷ ರೂ. ವಹಿವಾಟಿನವರೆಗೆ ಜಿಎಸ್ಟಿ ಇರಲಿಲ್ಲ. ಈ ಮಿತಿಯನ್ನು 40 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 1.5 ಕೋಟಿ ವಹಿವಾಟು ಹೊಂದಿದವರು ಕಂಪೋಸೀಷನ್ ಸ್ಕೀಂ ಮೂಲಕ ಶೇಕಡ 1 ರಷ್ಟು ಜಿಎಸ್ಟಿ ಪಾವತಿಸಬಹುದು. ಅದೇ ರೀತಿ 230 ವಸ್ತುಗಳಲ್ಲಿ 200 ವಸ್ತುಗಳ ಮೇಲಿನ ತೆರಿಗೆ ಸ್ಲ್ಯಾಬ್ ಇಳಿಕೆ ಮಾಡಲಾಗಿದೆ. ಗೃಹ ನಿರ್ಮಾಣ ತೆರಿಗೆ ಶೇಕಡ 5 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...