ನವದೆಹಲಿ: ಮುಂದಿನ ತಿಂಗಳು ಜಿಎಸ್‌ಟಿ ದರ ಮತ್ತೆ ಪರಿಷ್ಕರಿಸಲಾಗುವುದು. ಕಳೆದ ತಿಂಗಳು ಮೊಸರು, ಹಾಲು, ಅಕ್ಕಿ, ಜೋಳದ ಹಿಟ್ಟು ಸೇರಿದಂತೆ ಅನೇಕ ಆಹಾರ ಪದಾರ್ಥಗಳ ತೆರಿಗೆ ವಿನಾಯಿತಿಯನ್ನು ಜಿಎಸ್‌ಟಿ ಮಂಡಳಿ ವಾಪಸ್ ಪಡೆದಿತ್ತು.
ಮುಂದಿನ ತಿಂಗಳು ಮತ್ತೊಮ್ಮೆ ಜಿಎಸ್‌ಟಿ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಸೆಪ್ಟಂಬರ್ ನಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಜಿಎಸ್‌ಟಿ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು. ಕೆಲವು ಸರಕು ಸೇವೆಗಳಿಗೆ ಇದ್ದ ವಿನಾಯಿತಿ ಹಿಂಪಡೆದು ಕೆಲವು ತೆರಿಗೆಗಳನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿ ಜಿಎಸ್‌ಟಿ ಪರಿಷ್ಕರಣೆಯ ಎರಡನೇ ಸುತ್ತಿನ ಕಾರ್ಯ ಕೈಗೊಂಡಿದೆ. ಆಟೋಮೊಬೈಲ್, ಎಲೆಕ್ಟ್ರಿಕ್ ವಸ್ತುಗಳು, ಎಲೆಕ್ಟ್ರಿಕ್ ವಾಹನ, ಯೂರಿಯಾ ರಸಗೊಬ್ಬರ ಉತ್ಪಾದನೆ ಮಾಡಿದಾಗ ಸಿದ್ಧ ಉತ್ಪನ್ನಗಳ ಮೇಲಿನ ತೆರಿಗೆಗಿಂತಲೂ ಅವುಗಳಿಗೆ ಬಳಸುವ ಕಚ್ಚಾವಸ್ತುಗಳ ಮೇಲಿನ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ಹೊಂದಾಣಿಕೆ ಮಾಡಿ ಅಕ್ರಮಗಳನ್ನು ತಪ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎನ್ನಲಾಗಿದೆ.