ನವದೆಹಲಿ: ಕೇಂದ್ರ ಸರ್ಕಾರದಿಂದ ಜಿಎಸ್ಟಿ ಸಲ್ಲಿಕೆ ವಿಳಂಬ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಜಿಎಸ್ಟಿಆರ್ ವಿಳಂಬ ಸಲ್ಲಿಕೆಗೆ ವಿಧಿಸುವ ಬಡ್ಡಿಯನ್ನು ಕಡಿತ ಮಾಡಲಾಗಿದೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಲ್ಲಿಕೆಗೆ ವಿಧಿಸಲಾಗುವ ವಿಳಂಬ ಶುಲ್ಕವನ್ನು ಕೇಂದ್ರ ಸರ್ಕಾರದ ಮನ್ನಾ ಮಾಡಿದೆ. ದೇಶದಲ್ಲಿ ಕೊರೋನಾ ಸೋಂಕಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ತೆರಿಗೆದಾರರಿಗೆ ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ಹಣಕಾಸು ಸಚಿವಾಲಯ ಅನೇಕ ವಿನಾಯಿತಿ ನೀಡಿದೆ.
5 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸುವವರಿಗೆ 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಯಾವುದೇ ವಿಳಂಬ ಶಬ್ದವಿಲ್ಲದೆ ತೆರಿಗೆ ತೆರಿಗೆ ಪಾವತಿಗೆ ತಿಳಿಸಿದ್ದು, 15 ದಿನಕ್ಕೆ ಶೇಕಡ 8 ರಷ್ಟು ನಂತರದ ಅವಧಿಗೆ ಶೇಕಡ 18 ರಷ್ಟು ಬಡ್ಡಿ ಪಾವತಿಸಬೇಕಿದೆ.
ಕೊರೋನಾ ಕಾರಣದಿಂದ ತೆರಿಗೆದಾರರಿಗೆ ಸಮಸ್ಯೆಯಾಗಿರುವ ಕಾರಣ ಜಿಎಸ್ಟಿಆರ್ ವಿಳಂಬ ಸಲ್ಲಿಕೆ ಬಡ್ಡಿ ಮನ್ನಾ ಮಾಡಿ, ವಿಳಂಬ ಶುಲ್ಕ ಮನ್ನಾ ಮಾಡಲಾಗಿದೆ ಎಂದು ಹೇಳಲಾಗಿದೆ.