ನವದೆಹಲಿ: ಜಿ.ಎಸ್.ಟಿ. ಆದಾಯ ಸಂಗ್ರಹದಲ್ಲಿ ದಾಖಲೆ ನಿರ್ಮಾಣವಾಗಿದೆ. ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.
ಆರ್ಥಿಕ ಚಟುವಟಿಕೆಗಳ ಸುಧಾರಣೆಯ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಏಪ್ರಿಲ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 1.68 ಲಕ್ಷ ಕೋಟಿ ರೂ. ಮುಟ್ಟಿದೆ.
ಮಾರ್ಚ್ 2022 ರಲ್ಲಿ 1.42 ಲಕ್ಷ ಕೋಟಿ ರೂ.ನಂತರ ಎರಡನೇ ಅತಿ ಹೆಚ್ಚು ಸಂಗ್ರಹ ಇದಾಗಿದೆ. ಏಪ್ರಿಲ್ ನಲ್ಲಿ ಮಾರ್ಚ್ ತಿಂಗಳ ಸಂಗ್ರಹಕ್ಕಿಂತ 25,000 ಕೋಟಿ ರೂ. ಹೆಚ್ಚಿದೆ.
ಏಪ್ರಿಲ್‌ನಲ್ಲಿ ಸಂಗ್ರಹವಾದ ಒಟ್ಟು ಜಿ.ಎಸ್.ಟಿ. 1,67,540 ಕೋಟಿ ರೂ.ಗಳಲ್ಲಿ ಸಿ.ಜಿ.ಎಸ್.ಟಿ. 33,159 ಕೋಟಿ ರೂ., ಎಸ್.ಜಿ.ಎಸ್.ಟಿ. 41,793 ಕೋಟಿ ರೂ., ಐ.ಜಿ.ಎಸ್.ಟಿ. 81,939 ಕೋಟಿ ರೂ. ಮತ್ತು ಸೆಸ್ 10,649 ಕೋಟಿ ರೂ. ಆಗಿದೆ.
ಏಪ್ರಿಲ್ 2022 ರ ಆದಾಯವು ಕಳೆದ ವರ್ಷದ ಅದೇ ತಿಂಗಳ GST ಆದಾಯಕ್ಕಿಂತ ಶೇ. 20 ರಷ್ಟು ಹೆಚ್ಚಾಗಿದೆ. ಮೊದಲ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹ 1.5 ಲಕ್ಷ ಕೋಟಿ ರೂ. ದಾಟಿದೆ.