ನವದೆಹಲಿ: COVID-19 ಔಷಧಿಗಳ GST ದರವನ್ನು ಶೇ. 5 ರಷ್ಟು GST ಯಲ್ಲಿ ನಿಗದಿಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೋವಿಡ್-19 ಔಷಧಿಗಳು ಮತ್ತು ಉಪಕರಣಗಳನ್ನು ಶೇಕಡ 5 ಜಿಎಸ್‌ಟಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇತರ ಔಷಧಿಗಳನ್ನು ಜಿಎಸ್‌ಟಿ ದರದಲ್ಲಿ ಶೇಕಡ 5 ರಿಂದ 12 ರ ನಡುವೆ ಮಾರಾಟ ಮಾಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಶೇ.66ರಷ್ಟು ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆಗಳನ್ನು ಕೇಂದ್ರ ಸರ್ಕಾರವೇ ನಡೆಸುತ್ತಿದೆ ಎಂದು ಚೌಧರಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಅವರು ಉತ್ತರ ನೀಡಿ, ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ, ಜಿಎಸ್‌ಟಿ ದರದಲ್ಲಿ ಶೇ.5 ರಿಂದ ಶೇ. 12ರ ನಡುವೆ ಎಲ್ಲ ಔಷಧಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಯಿತು. ಕೋವಿಡ್-19 ಸಂಬಂಧಿತ ಔಷಧಗಳು ಮತ್ತು ಉಪಕರಣಗಳ ಜಿ.ಎಸ್.ಟಿ. ದರವನ್ನು ಶೇ.5 ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ವಿಮೆಯ ಜಿ.ಎಸ್.ಟಿ. ದರ ಶೇ. 18 ರಷ್ಟು ಇದೆ. ಇದು ದೇಶದಲ್ಲಿ ಜಿ.ಎಸ್.ಟಿ. ಪೂರ್ವದ ದಿನಗಳಲ್ಲಿ ಇದ್ದಂತೆಯೇ ಇದೆ. ಹಿರಿಯ ನಾಗರಿಕರು ಆರೋಗ್ಯ ವಿಮಾ ಪಾಲಿಸಿಗಳ ಮೇಲೆ 1 ಲಕ್ಷದವರೆಗೆ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು ಎಂದು ಅವರು ಹೇಳಿದರು.