
ಬೆಂಗಳೂರು: ಚಂಡಿಗಢದಲ್ಲಿ ಇತ್ತೀಚೆಗೆ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಹಾಲಿನ ಉಪ ಉತ್ಪನ್ನಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಲು ತೀರ್ಮಾನ ಕೈಗೊಳ್ಳಲಾಗಿದೆ.
ಇದರಿಂದಾಗಿ ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಮೇಲೆ ಶೇಕಡ 5ರಷ್ಟು ತೆರಿಗೆ ಹೊರೆ ಬೀಳಲಿದೆ. ಪ್ರತಿ ಲೀಟರ್ ಮೊಸರಿಗೆ 2.20 ರೂಪಾಯಿ ಹೆಚ್ಚಳವಾಗಲಿದೆ. ಒಂದು ಲೀಟರ್ ಲಸ್ಸಿಗೆ 3.75 ರೂ. ಹೆಚ್ಚಳವಾಗಲಿದೆ. ಒಂದು ಲೀಟರ್ ಮಜ್ಜಿಗೆಗೆ 3 ರೂಪಾಯಿ ಮತ್ತು ಒಂದು ಕೆಜಿ ಪನ್ನೀರಿಗೆ 15 ರೂಪಾಯಿ ಹೆಚ್ಚಳವಾಗಲಿದೆ. ಜಿ.ಎಸ್.ಟಿ. ಹೆಚ್ಚಳದ ಆದೇಶ ಕೈ ಸೇರಿದ ನಂತರ ಕೆಎಂಎಫ್ ಬೆಲೆ ಏರಿಕೆ ಮಾಡಲು ಸಿದ್ಧತೆ ಕೈಗೊಂಡಿದೆ ಎಂದು ಹೇಳಲಾಗಿದೆ.