
ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೊಸ ವರ್ಷದಿಂದ ಜೀವನ ದುಬಾರಿಯಾಗಲಿದೆ.
ಆಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು ಶೇಕಡ 5 ರಷ್ಟು ಜಿಎಸ್ಟಿ ಪಾವತಿಸಬೇಕಿದೆ. ಪಾದರಕ್ಷೆಗಳ ಮೇಲೆ ಶೇಕಡ 12 ರಷ್ಟು, ರೆಡಿಮೇಡ್ ಬಟ್ಟೆ ಸೇರಿ ಎಲ್ಲಾ ಮಾದರಿ ಬಟ್ಟೆಗಳ ಮೇಲೆ ಶೇಕಡ 12 ರಷ್ಟು ಜಿಎಸ್ಟಿ ಕಟ್ಟಬೇಕಿದೆ. ಹತ್ತಿಬಟ್ಟೆ ಬಿಟ್ಟು ಉಳಿದ ಬಟ್ಟೆಗಳ ಬೆಲೆ ಏರಿಕೆ ಆಗಲಿದೆ. ಹೊಸ ವರ್ಷದಿಂದ ಜನರ ಜೇಬಿಗೆ ಕತ್ತರಿ ಪಕ್ಕಾ ಆಗಿದೆ.
ಜನವರಿಯಲ್ಲಿ ಬದಲಾದ ಜಿಎಸ್ಟಿ ನಿಯಮಗಳು ಜಾರಿಗೆ ಬರಲಿವೆ. ಟ್ಯಾಕ್ಸಿ, ಆಹಾರ ವಿತರಣೆ ಸೇವೆಗೆ ತೆರಿಗೆ ವಿಧಿಸಲಾಗುತ್ತದೆ. ಬಟ್ಟೆ, ಪಾದರಕ್ಷೆಗಳಿಗೆ ಶೇಕಡ 12 ರಷ್ಟು ತೆರಿಗೆ ಪಾವತಿಸಬೇಕಿದೆ.
ಜನವರಿ ಒಂದರಿಂದ ದುನಿಯಾ ದುಬಾರಿಯಾಗಲಿದ್ದು, ಇ-ಕಾಮರ್ಸ್ ಸೇವೆಗಳ ಮೇಲಿನ ಜಿಎಸ್ಟಿ ಹೊಸ ವರ್ಷದಿಂದ ಏರಿಕೆಯಾಗಲಿದೆ. ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆಯಾಗಲಿದೆ. ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ, ಎಲೆಕ್ಟ್ರಾನಿಕ್, ಆಟೋಮೊಬೈಲ್, ಪಾದರಕ್ಷೆ, ಬಟ್ಟೆಗಳ ಮೇಲೆ ದುಬಾರಿ ಜಿಎಸ್ಟಿ ಹಾಕಲಾಗುತ್ತದೆ.
ಜನವರಿ 1 ರಿಂದ ಹಲವು ಸೇವೆಗಳ ಜಿಎಸ್ಟಿ ಹೆಚ್ಚಾಗಲಿದೆ. ಇ-ಕಾಮರ್ಸ್ ಸೇವೆಗಳ ಮೇಲೆ ಶೇಕಡ 5 ರಷ್ಟು ಜಿಎಸ್ಟಿ ಹಾಕಲಾಗುವುದು. ಆಪ್ ಮೂಲಕ ಆಟೋ, ಕಾರ್ ಬುಕಿಂಗ್ ಮಾಡಲು ಶೇಕಡ 5 ರಷ್ಟು ಜಿಎಸ್ಟಿ ಪಾವತಿಸಬೇಕುದೆ ಎನ್ನಲಾಗಿದೆ.