ನವದೆಹಲಿ: ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಡಿಸೆಂಬರ್ 31 ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. 2019- 20ನೇ ಸಾಲಿನ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಡಿಸೆಂಬರ್ 31 ರವರೆಗೆ ಅವಕಾಶ ನೀಡಲಾಗಿದೆ.
ಈ ಮೊದಲು ನವೆಂಬರ್ 30ರ ವರೆಗೆ ಗಡುವು ನೀಡಲಾಗಿತ್ತು. ಅದನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ಆಡಿಟ್ ಮಾಡಬೇಕಿರುವ ತೆರಿಗೆದಾರರಿಗೆ 2021ರ ಜನವರಿ 31ರವರೆಗೆ ತೆರಿಗೆ ರಿಟರ್ನ್ ಸಲ್ಲಿಕೆಗೆ ಅವಕಾಶವಿದೆ. ಅದೇ ರೀತಿ ಅಂತರರಾಷ್ಟ್ರೀಯ ಮತ್ತು ದೇಶಿಯ ವಿಶೇಷ ವಹಿವಾಟು ನಡೆಸುವವರಿಗೆ ಐಟಿಆರ್ ಸಲ್ಲಿಕೆ ಗಡುವನ್ನು 2021 ರ ಜನವರಿ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ
ಅದೇ ರೀತಿ, 2018 19 ನೇ ಸಾಲಿನ ವಾರ್ಷಿಕ ಜಿಎಸ್ಟಿ ಪಾವತಿ ವಿವರ ಸಲ್ಲಿಸುವ ದಿನಾಂಕವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಜಿಎಸ್ಟಿ ಪಾವತಿ ವಿವರ ಸಲ್ಲಿಕೆಗೆ ಅಕ್ಟೋಬರ್ 31 ರ ಗಡುವು ನಿಗದಿ ಮಾಡಲಾಗಿತ್ತು. ಆರ್ಥಿಕ ಸಂಕಷ್ಟ, ವ್ಯಾಪಾರ ವಹಿವಾಟು ಕುಸಿತವಾದ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಣೆ ಮಾಡಲು ಜಿಎಸ್ಟಿ ಮಂಡಳಿ ತೀರ್ಮಾನ ಕೈಗೊಂಡಿದೆ.