ಚಂಡೀಗಢ: ಹಣದುಬ್ಬರದ ಕಾರಣದಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೇಂದ್ರ ಸರ್ಕಾರ ಕೂಡ ಜನಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕಿದೆ.
ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಅನೇಕ ವಸ್ತು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಬದಲಾವಣೆ ಮಾಡಲಾಗಿದೆ. ಪ್ರಿ ಪ್ಯಾಕ್ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಕೆಲವು ವಸ್ತುಗಳ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಜುಲೈ 18 ರಿಂದ ತೆರಿಗೆ ಹೆಚ್ಚಳ ವಿನಾಯಿತಿ ಜಾರಿಗೆ ಬರಲಿದೆ.
ಶೇಕಡ 5 ರಷ್ಟು ತೆರಿಗೆ ವ್ಯಾಪ್ತಿಗೆ ಮೊಸರು, ಮಜ್ಜಿಗೆ, ಜೇನುತುಪ್ಪ, ತರಕಾರಿ, ಮಾಂಸ ಮೀನು ಸೇರಿಸಲಾಗಿದೆ.
ಶೇಕಡ 12 ರಷ್ಟು ಜಿ.ಎಸ್.ಟಿ. ವ್ಯಾಪ್ತಿಗೆ ನಕ್ಷೆ, ಅಟ್ಲಾಸ್ ಸೇರ್ಪಡೆ ಮಾಡಲಾಗಿದೆ
ಚೆಕ್ ಬುಕ್ ವಿತರಣೆಗೆ ಬ್ಯಾಂಕ್ ಗಳು ವಿಧಿಸುವ ಸೇವಾ ಶುಲ್ಕ ಶೇಕಡ 18ಕ್ಕೆ ನಿಗದಿ ಮಾಡಲಾಗಿದೆ.
ಪೆಟ್ರೋಲಿಯಂ, ವೈಜ್ಞಾನಿಕ ಮತ್ತು ತಾಂತ್ರಿಕ ಉಪಕರಣಗಳಿಗೆ ಶೇಕಡ 5 ರಿಂದ 12 ರಷ್ಟು ತೆರಿಗೆ ವಿಧಿಸಲಾಗುವುದು.
ಇ – ತ್ಯಾಜ್ಯಕ್ಕೆ ಶೇಕಡ 5 ರಿಂದ 10 ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.
ಶೇಕಡ 12 ರಿಂದ 18 ರಷ್ಟು ಜಿ.ಎಸ್.ಟಿ. ವ್ಯಾಪ್ತಿಗೆ ಎಲ್ಇಡಿ ಲೈಟ್, ಮುದ್ರಣ ಇಂಕ್, ಚಾಕು, ಪೇಪರ್ ಕಟಿಂಗ್ ಬ್ಲೇಡ್, ಪೆನ್ಸಿಲ್ ಶಾರ್ಪ್ನರ್, ಚಮಚ, ಪೋರ್ಕ್, ಕೇಕ್ ಸರ್ವರ್ ಸಾಧನ, ವಾಟರ್ ಪಂಪ್, ಸಬ್ ಮರ್ಸಿಬಲ್ ಪಂಪ್, ಬೈಸಿಕಲ್ ಪಂಪ್, ಧಾನ್ಯ ಸಂಸ್ಕರಣಾ ಯಂತ್ರ ಸೇರಿಸಲಾಗಿದೆ.