ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅನ್ವಯ ರಾಜ್ಯಕ್ಕೆ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರದ ವತಿಯಿಂದ ಮೂರು ತಿಂಗಳ ಬಾಕಿ 4314 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
2019 ರ ಡಿಸೆಂಬರ್ ತಿಂಗಳಿಂದ 2020 ಫೆಬ್ರವರಿವರೆಗಿನ ಆದಾಯ ನಷ್ಟ ಪರಿಹಾರವನ್ನು ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. 2017ರ ಜುಲೈ 1ರಂದು ಜಿ.ಎಸ್.ಟಿ. ಕಾಯ್ದೆ ಜಾರಿಯಾಗಿ 5 ವರ್ಷಗಳ ಕಾಲ ಕೇಂದ್ರ ಸರ್ಕಾರ ರಾಜ್ಯಗಳಿಗೆ ಆದಾಯ ನಷ್ಟ ಪರಿಹಾರ ನೀಡಲಿದೆ.
ಈಗ ಮೂರು ತಿಂಗಳ ಪರಿಹಾರ ನೀಡಲಾಗಿದ್ದು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಜಿಎಸ್ಟಿ ಬಾಕಿ ಮೊತ್ತ 1800 ಕೋಟಿ ರೂಪಾಯಿ ಬರಬೇಕಾಗಿದೆ ಎಂದು ಹೇಳಲಾಗಿದೆ.