ಬೆಂಗಳೂರು: ಜಿಎಸ್ಟಿ ಪರಿಹಾರದ ಕುರಿತಾಗಿ ಕೇಂದ್ರ ಸರ್ಕಾರ ನೀಡಿದ ಆಯ್ಕೆಗಳಲ್ಲಿ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುವ ಒಂದನೇ ಆಯ್ಕೆಯನ್ನು ಮಾಡಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
18,289 ಕೋಟಿ ರೂ. ಪರಿಹಾರ ಪಡೆಯಲು ತೀರ್ಮಾನಿಸಲಾಗಿದೆ. ಇದರಲ್ಲಿ 11,324 ಕೋಟಿ ರೂಪಾಯಿ ಸಾಲದಿಂದ ಭರ್ತಿಯಾಗಲಿದ್ದು, ಉಳಿದ 6865 ಕೋಟಿ ರೂ. ಸೆಸ್ ನಿಂದ ಪಾವತಿಸಲಾಗುವುದು.
18,289 ಕೋಟಿ ರೂ. ಅಥವಾ 25,508 ಕೋಟಿ ರೂ. ಪರಿಹಾರದ ಎರಡು ಆಯ್ಕೆಗಳನ್ನು ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದು ರಾಜ್ಯದ ಹಣಕಾಸು ಸ್ಥಿತಿಗೆ ಅನುಕೂಲವಾಗುವಂತೆ ಒಂದನೇ ಆಯ್ಕೆಯನ್ನು ಮಾಡಿಕೊಳ್ಳಲಾಗಿದೆ. ಜಿಎಸ್ಟಿಯಿಂದ ಆಗಿರುವ ಆದಾಯದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರದಿಂದ ಸಾಲ ಪಡೆಯುವ ಆಯ್ಕೆಯನ್ನು ಮುಂದಿಡಲು ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರ 1 ನೇ ಮೊದಲನೇ ಆಯ್ಕೆಗೆ ಅಸ್ತು ಎಂದಿದೆ ಎನ್ನಲಾಗಿದೆ.