ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಜಿಎಸ್‌ಟಿ ವಿನಾಯಿತಿಗಳನ್ನು ಘೋಷಿಸಿದ್ದಾರೆ.
ಲಖ್ನೋದಲ್ಲಿ ಜಿಎಸ್‌ಟಿ ಕೌನ್ಸಿಲ್‌ನ ಮಹತ್ವದ ಸಭೆ ಮುಗಿದ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ. ಜಿಎಸ್‌ಟಿ ಕೌನ್ಸಿಲ್‌ನ 45 ನೇ ಸಭೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಭಾಗಿಯಾಗಿದ್ದರು. ಕೋವಿಡ್ -19 ಸಾಂಕ್ರಾಮಿಕ ರೋಗ ಆರಂಭದ ನಂತರ ನಡೆದ ಮೊದಲ ದೈಹಿಕ ಸಭೆ ಇದಾಗಿದೆ.
ಪ್ರಮುಖ ನಿರ್ಧಾರಗಳು –
ಜೀವರಕ್ಷಕ ಔಷಧಗಳಾದ ಜೊಲ್‌ಜೆಂಗಲ್ಸ್ಮಾ ಮತ್ತು ವಿಲ್ಟೆಪ್ಸೊಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.
ಕೋವಿಡ್ -19 ಗೆ ಸಂಬಂಧಿಸಿದ ಔಷಧಗಳ ಮೇಲಿನ ಜಿಎಸ್‌ಟಿ ರಿಯಾಯಿತಿ ವಿಸ್ತರಿಸಲಾಗಿದೆ. ಕೊರೋನಾ ಔಷಧ ಮೇಲಿನ ಜಿಎಸ್ಟಿ ವಿನಾಯಿತಿಯನ್ನು ಡಿಸೆಂಬರ್ 31 ರವರೆಗೆ ಮುಂದುವರಿಕೆ ಮಾಡಲಾಗಿದೆ.
ಹಡಗಿನ ಮೂಲಕ ರಫ್ತು ಸರಕುಗಳ ಸಾಗಣೆ, ಜಿಎಸ್ಟಿಯಿಂದ ವಾಯು ವಿನಾಯಿತಿ ನೀಡಲಾಗಿದೆ.
ಮಸ್ಕ್ಯುಲರ್ ಚಿಕಿತ್ಸೆ ನೀಡಲು ಆರೋಗ್ಯ ಸಚಿವಾಲಯವು ಸೂಚಿಸಿದ ಔಷಧಗಳು,
ಆರೋಗ್ಯ ಸಚಿವಾಲಯ ಮತ್ತು ಔಷಧೀಯ ಇಲಾಖೆಯ ಶಿಫಾರಸಿನ ಮೇರೆಗೆ, ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಕೆಲವು ಔಷಧಗಳಿಗೆ ವಿನಾಯಿತಿ ನೀಡಲಾಗಿದೆ.