ನವದೆಹಲಿ: ನಕಲಿ ಇನ್ವಾಯ್ಸ್ ಸೃಷ್ಟಿ ಮಾಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ವಂಚಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಹೊಸ ಯೋಜನೆ ರೂಪಿಸಿದೆ.
ಅಕ್ಟೋಬರ್ 1 ರಿಂದ ಇ -ಇನ್ವಾಯ್ಸ್ ಯೋಜನೆ ಜಾರಿಗೆ ಬರಲಿದ್ದು, ಆರಂಭಿಕ ಹಂತದಲ್ಲಿ ವಾರ್ಷಿಕ ವಹಿವಾಟು 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ಇರುವ ಉದ್ದಿಮೆಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ ಎನ್ನಲಾಗಿದೆ.
ಸಿಬಿಐಸಿ ಪ್ರಧಾನ ಆಯುಕ್ತ ಯೋಗೇಂದ್ರ ಗರ್ಗ್ ಈ ಕುರಿತು ಮಾತನಾಡಿ, ಅಕ್ಟೋಬರ್ 1 ರಿಂದ ಇ – ಇನ್ವಾಯ್ಸ್ ಯೋಜನೆ ಜಾರಿಗೆ ಬರಲಿದೆ. ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿಎಸ್ಟಿ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.