ನವದೆಹಲಿ: ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಅತ್ಯಧಿಕ ಜಿಗಿತ ದಾಖಲಿಸಿದೆ ಎಂದು ಸರ್ಕಾರ ಹೇಳಿದೆ.
ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಗಳು ನವೆಂಬರ್‌ನಲ್ಲಿ ಶೇ 15 ರಷ್ಟು ಏರಿಕೆಯಾಗಿ 1.67 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ನವೆಂಬರ್ 2023 ರ GST ಆದಾಯ ಸಂಗ್ರಹವು ಸುಮಾರು 1.68 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದ್ದು, ಇದು ವಾರ್ಷಿಕ ಆಧಾರದ ಮೇಲೆ 15% ಜಿಗಿತವಾಗಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. FY24 ರಲ್ಲಿ ಒಟ್ಟು GST ಸಂಗ್ರಹವು ಆರನೇ ಬಾರಿಗೆ 1.6 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.
“ನವೆಂಬರ್, 2023 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯವು 1,67,929 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 30,420 ಕೋಟಿ ರೂ., ಎಸ್‌ಜಿಎಸ್‌ಟಿ 38,226 ಕೋಟಿ ರೂ., ಐಜಿಎಸ್‌ಟಿ 87,009 ಕೋಟಿ ರೂ. ಆಗಿದೆ.
ತಿಂಗಳಿನಲ್ಲಿ, ದೇಶೀಯ ವಹಿವಾಟುಗಳಿಂದ(ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 20% ಹೆಚ್ಚಾಗಿದೆ. ಎಫ್‌ವೈ 24 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಆರನೇ ಬಾರಿಗೆ 1.60 ಲಕ್ಷ ಕೋಟಿ ರೂ. ದಾಟಿದೆ ಎಂದು ಸಚಿವಾಲಯ ತಿಳಿಸಿದೆ.