ನವದೆಹಲಿ: ಮಾರ್ಚ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹವು ಕಳೆದ ವರ್ಷ ಮಾರ್ಚ್‌ನಲ್ಲಿನ ಜಿಎಸ್‌ಟಿ ಆದಾಯಕ್ಕಿಂತ ಶೇಕಡ 13 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ. ಇದು ನಾಲ್ಕನೇ ಬಾರಿಗೆ 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ, ಇದು ಜಿಎಸ್‌ಟಿ ಅನುಷ್ಠಾನದ ನಂತರ ಎರಡನೇ ಅತಿ ಹೆಚ್ಚು ಸಂಗ್ರಹವನ್ನು ದಾಖಲಿಸಿದೆ.
ಮಾರ್ಚ್ 2023 ರಲ್ಲಿ ಒಟ್ಟು GST ಆದಾಯವು 1,60,122 ಕೋಟಿ ರೂ.ಗಳಾಗಿದ್ದು, ಇದರಲ್ಲಿ CGST 29,546 ಕೋಟಿ ರೂ., SGST 37,314 ಕೋಟಿ ರೂ., IGST 82,907 ಕೋಟಿ ರೂ. (42,503 ಕೋಟಿ ರೂ.ಸಂಗ್ರಹ ಮತ್ತು ಸರಕುಗಳ ಆಮದು ಸೇರಿದಂತೆ) 10,355 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 960 ಕೋಟಿ ರೂ.ಸೇರಿದಂತೆ) ಎಂದು ಸಚಿವಾಲಯ ತಿಳಿಸಿದೆ.