ನವದೆಹಲಿ: ಜಿಎಸ್ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಆಗಿದೆ. 2020 ರ ಡಿಸೆಂಬರ್ ನಲ್ಲಿ ದಾಖಲೆ ಪ್ರಮಾಣದ ಜಿಎಸ್ಟಿ ಸಂಗ್ರಹವಾಗಿದ್ದು, ಬರೋಬ್ಬರಿ 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.
1,15,174 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್ ಜಿಎಸ್ಟಿ ಆದಾಯ ಶೇಕಡ 15 ರಷ್ಟು ಜಾಸ್ತಿಯಾಗಿದೆ.
ಕಳೆದ 21 ತಿಂಗಳಲ್ಲೇ ಡಿಸೆಂಬರ್ ತಿಂಗಳ ಬೆಳವಣಿಗೆ ಹೆಚ್ಚಿನದ್ದಾಗಿದೆ. ಕೊರೋನಾ ನಂತರ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಇದುವರೆಗಿನ ಜಿಎಸ್ಟಿ ಸಂಗ್ರಹದಲ್ಲಿ ಡಿಸೆಂಬರ್ ನಲ್ಲಿ ಸಂಗ್ರಹವಾದ ಮೊತ್ತ ಗರಿಷ್ಠ ಮೊತ್ತವಾಗಿದೆ. 2019 ರ ಏಪ್ರಿಲ್ ನಲ್ಲಿ 1.13 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು.