ನವದೆಹಲಿ: ಜಿಎಸ್‌ಟಿ ಸಂಗ್ರಹ ನವೆಂಬರ್ ನಲ್ಲಿ 11% ರಷ್ಟು ಹೆಚ್ಚಾಗಿ ಸತತ ಒಂಬತ್ತನೇ ತಿಂಗಳಲ್ಲಿ 1.4 ಲಕ್ಷ ಕೋಟಿ ರೂ. ಆದಾಯ ಬಂದಿದೆ.
ಹೆಚ್ಚಿದ ಗ್ರಾಹಕರ ಖರ್ಚು ಮತ್ತು ಉತ್ತಮ ಅನುಸರಣೆಯಿಂದಾಗಿ ಸರಕು ಮತ್ತು ಸೇವಾ ತೆರಿಗೆಯಿಂದ(ಜಿಎಸ್‌ಟಿ) ಸಂಗ್ರಹಣೆಯು ನವೆಂಬರ್‌ನಲ್ಲಿ ಸುಮಾರು 1.46 ಲಕ್ಷ ಕೋಟಿ ರೂ.ಗೆ 11% ರಷ್ಟು ಹೆಚ್ಚಾಗಿದೆ. ಆದಾಯವು 1.4 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದ ಸತತ ಒಂಬತ್ತನೇ ತಿಂಗಳಾಗಿದೆ. ಆದರೆ, ನವೆಂಬರ್‌ನಲ್ಲಿ ಆಗಸ್ಟ್ ನಿಂದ ಕಡಿಮೆ ಸಂಗ್ರಹವಾಗಿದೆ.
ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹಣೆಯು ಹಬ್ಬದ ವೆಚ್ಚದ ಮೇಲೆ 1.52 ಲಕ್ಷ ಕೋಟಿ ರೂಪಾಯಿಗಳ ಎರಡನೇ ಅತ್ಯಧಿಕ ಮಟ್ಟ ಮುಟ್ಟಿತ್ತು. ನವೆಂಬರ್ 2022 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,45,867 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಜಿಎಸ್‌ಟಿ 25,681 ಕೋಟಿ ರೂ., ರಾಜ್ಯ ಜಿಎಸ್‌ಟಿ ರೂ. 32,651 ಕೋಟಿ, ಇಂಟಿಗ್ರೇಟೆಡ್ ಜಿಎಸ್‌ಟಿ 77,103 ಕೋಟಿ ರೂ. (ರೂ. 38,635 ಕೋಟಿ ಆಮದು ಮೇಲೆ ಸಂಗ್ರಹವಾದ ಸರಕು ಸೇರಿದಂತೆ) ಮತ್ತು ಸೆಸ್ 10,433 ಕೋಟಿ ರೂ.(ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 817 ಕೋಟಿ ರೂ. ಸೇರಿದಂತೆ) ಆಗಿದೆ.
ನವೆಂಬರ್ 2022 ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇಕಡಾ 11 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.