
ನವದೆಹಲಿ: ಬಟ್ಟೆಗೆ ಶೇಕಡ 12ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಎಸ್ಟಿ ಮಂಡಳಿ ಸಭೆಯಲ್ಲಿ ತಡೆ ನೀಡಲಾಗಿದೆ.
ಗಾರ್ಮೆಂಟ್ಸ್, ಟೆಕ್ಸ್ ಟೈಲ್ಸ್ ಮತ್ತು ಪಾದರಕ್ಷೆ ಮೇಲಿನ ಜಿಎಸ್ಟಿ ದರವನ್ನು ಶೇಕಡಾ 5 ರಿಂದ 12ಕ್ಕೆ ಹೆಚ್ಚಳ ಮಾಡುವ ನಿರ್ಧಾರವನ್ನು ತಡೆಹಿಡಿಯಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಬಟ್ಟೆಗೆ ಜಿಎಸ್ಟಿ ಏರಿಕೆ ಮಾಡದಿರಲು ತೀರ್ಮಾನಿಸಲಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್, ರಾಜಸ್ಥಾನ, ದೆಹಲಿ ಮೊದಲಾದ ರಾಜ್ಯಗಳು ಗಾರ್ಮೆಂಟ್ಸ್, ಟೆಕ್ಸ್ ಟೈಲ್ಸ್ ಮತ್ತು ಪಾದರಕ್ಷೆ ಮೇಲಿನ ಜಿಎಸ್ಟಿ ಏರಿಕೆಯ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಉದ್ಯಮ ವಲಯದಿಂದಲೂ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಟ್ಟೆಗೆ ಜಿಎಸ್ಟಿ ಏರಿಕೆ ನಿರ್ಧಾರ ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ.