ಬೆಂಗಳೂರು: ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಕೊರೋನಾ ತೆರಿಗೆ ವಿಧಿಸಬೇಕೆಂದು ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು ಮತ್ತು ಅರ್ಥಶಾಸ್ತ್ರಜ್ಞರು ಸರಕು ಮತ್ತು ಸೇವಾ ತೆರಿಗೆ(ಗಿ.ಎಸ್.ಟಿ.) ಮಂಡಳಿಗೆ ಮನವಿ ಮಾಡಿದ್ದಾರೆ.
ತಂಬಾಕು ಬಳಕೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದು ತಂಬಾಕು ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಬೇಕು. ಬೀಡಿ, ಸಿಗರೇಟ್, ಗುಟ್ಕಾ ಮೊದಲಾದ ತಂಬಾಕು ಉತ್ಪನ್ನಗಳ ಮೇಲೆ ಕೊರೋನಾ ತೆರಿಗೆ ವಿಧಿಸುವುದರಿಂದ ತೆರಿಗೆ ರೂಪದಲ್ಲಿ ಸುಮಾರು 19 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಗೆ ಇದರಿಂದ ನೆರವಾಗುತ್ತದೆ ಎಂದು ಹೇಳಲಾಗಿದೆ.