ಲಖ್ನೋ: ಸರಕು ಮತ್ತು ಸೇವಾ ತೆರಿಗೆ(GST) ರೀಫಂಡ್ ಪಡೆಯಲು ಆಧಾರ್ ನಂಬರ್ ಕಡ್ಡಾಯಗೊಳಿಸಲಾಗಿದೆ. ಜಿಎಸ್ಟಿ ರಿಜಿಸ್ಟ್ರೇಷನ್ ಗೆ ಆಧಾರ್ ಅನ್ನು ಹಂತಹಂತವಾಗಿ ಕಡ್ಡಾಯ ಮಾಡಲಾಗುವುದು.
ಉತ್ತರಪ್ರದೇಶದ ಲಖ್ನೋದಲ್ಲಿ ಇಂದು ನಡೆದ 45 ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಹಣ್ಣಿನ ಜ್ಯೂಸ್ ಗಳ ಮೇಲಿನ ಜಿಎಸ್ಟಿ ಶೇಕಡ 28ಕ್ಕೆ ಏರಿಕೆ ಮಾಡಲಾಗಿದೆ. ಶೇಕಡ 12 ರಷ್ಟು ಪರಿಹಾರದೊಂದಿಗೆ ಜಿಎಸ್ಟಿ 28 ಕ್ಕೆ ಏರಿಕೆ ಮಾಡಲಾಗಿದೆ.
ಸಂಕಷ್ಟದ ಸುಳಿಯ ನಡುವೆ ಮತ್ತೆ ತೆರಿಗೆ ಹೆಚ್ಚಳ ಮಾಡಲಾಗಿದೆ. ತಂಪು ಪಾನೀಯಗಳನ್ನು ಕುಡಿಯಲು ಇನ್ಮೇಲೆ ಯೋಚನೆ ಮಾಡಬೇಕಿದೆ. ತಂಪುಪಾನೀಯಗಳ ಮೇಲಿನ ಜಿಎಸ್ಟಿ ಶೇಕಡ 28 ರಷ್ಟು ಏರಿಕೆ ಮಾಡಲಾಗಿದೆ. ಈ ಮೂಲಕ ತೆರಿಗೆ ಕಡಿತದ ನಿರೀಕ್ಷೆಯಲ್ಲಿದ್ದವರಿಗೆ ಜಿಸ್ಟಿ ಮಂಡಳಿಯ ಸಭೆಯಲ್ಲಿ ಶಾಕ್ ನೀಡಲಾಗಿದೆ.