ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಆದಾಯ ಸಂಗ್ರಹದಲ್ಲಿ ಶೇಕಡ 8 ರಷ್ಟು ಪಾಲು ಹೊಂದಿರುವ ಶೇಕಡ 12 ರ ಸ್ಲ್ಯಾಬ್ ತೆರವುಗೊಳಿಸಲು ಜಿ.ಎಸ್.ಟಿ. ಸಮಿತಿ ಒಲವು ತೋರಿದೆ.
ಶೇಕಡ 18 ಮತ್ತು ಶೇಕಡ 28ರ ಸ್ಲ್ಯಾಬ್ ಗಳನ್ನು ಉಳಿಸಿಕೊಳ್ಳಲಿದ್ದು, ಶೇಕಡ 12 ಸ್ಲಾಬ್ ತೆರವುಗೊಳಿಸಲು ಚಿಂತನೆ ನಡೆದಿದೆ. 1000 ರೂ.ವರೆಗಿನ ಚಪ್ಪಲಿ, ಸಂಸ್ಕರಿಸಿದ ಕೆಲವು ವಸ್ತುಗಳು, ಬೆಣ್ಣೆ, ತುಪ್ಪ, ಹಣ್ಣಿನ ಜ್ಯೂಸ್, 1000 ರೂ.ವರೆಗಿನ ಹೋಟೆಲ್ ಕೊಠಡಿ, ಸೋಲಾರ್ ವಾಟರ್ ಹೀಟರ್ ಮೊದಲಾದವು ಶೇಕಡ 12ರ ಜಿ.ಎಸ್.ಟಿ. ವ್ಯಾಪ್ತಿಗೆ ಬರುತ್ತವೆ. ಈ ಸ್ಲ್ಯಾಬ್ ಕೈ ಬಿಡುವ ಬಗ್ಗೆ ಸಚಿವರ ಸಮಿತಿ ಒಲವು ತೋರಿದ್ದು, ಶೀಘ್ರವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.