ಯಾವುದೇ ಉದ್ಯಮ ಆರಂಭಿಸಬೇಕೆಂದರೂ ಜಿ.ಎಸ್.ಟಿ. ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಕೆಲವೊಮ್ಮೆ ಜಿ.ಎಸ್.ಟಿ. ನೋಂದಣಿ ತಡವಾಗುವ ಕಾರಣ ಇದರಿಂದ ವ್ಯಾಪಾರಿಗಳಿಗೆ ಅಡಚಣೆಯಾಗುತ್ತದೆ. ಇದೀಗ ಜಿ.ಎಸ್.ಟಿ. ನೋಂದಣಿ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಹೌದು, ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ, ಜಿ.ಎಸ್.ಟಿ ನೋಂದಣಿ ಮಾಡಿಸುವವರು ಅರ್ಜಿ ಸಲ್ಲಿಸುವ ವೇಳೆ ಆಧಾರ್ ಸಂಖ್ಯೆ ನೀಡಿದರೆ ಮೂರು ದಿನಗಳಲ್ಲಿ ಅನುಮೋದನೆ ಸಿಗುವಂತೆ ಕ್ರಮ ಕೈಗೊಂಡಿದೆ. ಜಿ.ಎಸ್.ಟಿ. ನೋಂದಣಿಗೆ ಆಧಾರ್ ದೃಢೀಕರಣವಾಗಿದ್ದು ಈ ನಿಯಮ ಆಗಸ್ಟ್ 21 ರಿಂದ ಜಾರಿಗೆ ಬಂದಿದೆ.
ಜಿ.ಎಸ್.ಟಿ. ನೋಂದಣಿ ಮಾಡಿಸಲು ಅರ್ಜಿ ಸಲ್ಲಿಸಿದ ವೇಳೆ ಆಧಾರ್ ಸಂಖ್ಯೆ ನೀಡದಲ್ಲಿ ನೋಂದಣಿಗೆ 21 ಕೆಲಸ ದಿನಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳು ತಗಲುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಜಿ.ಎಸ್.ಟಿ. ನೋಂದಣಿ ವೇಳೆ ಆಧಾರ್ ಸಂಖ್ಯೆ ನೀಡುವುದು ಅತ್ಯಗತ್ಯವಾಗಿದೆ.