
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಅನೇಕ ರಾಜ್ಯಗಳು ಬಡವರಿಗಾಗಿ ಗ್ರೀನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರ್ತಿವೆ. ಈ ಯೋಜನೆಯ ಮೂಲಕ ಬಡ ಜನರಿಗೆ ಒಂದು ರೂಪಾಯಿಗೆ ಒಂದು ಕೆಜಿ ಆಹಾರ ಧಾನ್ಯ ನೀಡುವ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಹಸಿರು ಕಾರ್ಡ್‌ಗಳ ಮೂಲಕ ಪ್ರಯೋಜನಗಳನ್ನು ನೀಡಲಿವೆ.
ಹರಿಯಾಣ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸಿವೆ. ಅನೇಕ ರಾಜ್ಯ ಸರ್ಕಾರಗಳು ಈ ವರ್ಷದ ಕೊನೆಯಲ್ಲಿ ಅಥವಾ 2021 ರ ಆರಂಭದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿವೆ. ಜಾರ್ಖಂಡ್ ಸರ್ಕಾರ ಈ ಯೋಜನೆಯನ್ನು ನವೆಂಬರ್ 15 ರಿಂದ ಜಾರಿಗೆ ತರಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿಯಿಂದ ವಂಚಿತ ಬಡ ಕುಟುಂಬಗಳಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ.
ಹಸಿರು ರೇಷನ್ ಕಾರ್ಡ್ ಪಡೆಯಲು ರೇಷನ್ ಕಾರ್ಡ್ ಪಡೆಯುವ ವಿಧಾನವನ್ನೇ ಅನುಸರಿಸಬೇಕು. ಸಾರ್ವಜನಿಕ ಸೇವಾ ಕೇಂದ್ರ ಅಥವಾ ಆಹಾರ ಪೂರೈಕೆ ಇಲಾಖೆ ಅಥವಾ ಪಿಡಿಎಸ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಹಸಿರು ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರಗಳು, ವಸತಿ ಮತ್ತು ಮತದಾರರ ಕಾರ್ಡ್ ಕಡ್ಡಾಯವಾಗಿರುತ್ತದೆ.