ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಕಳೆದ ಕೆಲವು ದಿನಗಳಲ್ಲಿ ನಿರಂತರ ಏರಿಕೆ ಕಾಣ್ತಿದೆ. ದೆಹಲಿಯಲ್ಲಿ ಅಡುಗೆ ಅನಿಲದ ಬೆಲೆ 819 ರೂಪಾಯಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಅಡುಗೆ ಅನಿಲದ ಬೆಲೆ 125 ರೂಪಾಯಿ ಹೆಚ್ಚಳ ಕಂಡಿದೆ. ಇಂಥ ಸಂದರ್ಭದಲ್ಲಿ ಅಡುಗೆ ಅನಿಲದ ಬೆಲೆ 100 ರೂಪಾಯಿ ಕಡಿಮೆಯಾದ್ರೂ ಗ್ರಾಹಕರು ಸ್ವಲ್ಪ ಮಟ್ಟಿಗೆ ಉಸಿರಾಡ್ತಾರೆ. ಪೇಟಿಎಂ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ.
ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್‌ಗಳ ನಡುವೆ ಗ್ರಾಹಕರಿಗೆ ಪರಿಹಾರ ನೀಡಲು ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ನಿರ್ಧರಿಸಿದೆ. ಪೇಟಿಎಂ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮೊದಲ ಬಾರಿ ಕಾಯ್ದಿರಿಸಲು ಗ್ರಾಹಕರಿಗೆ 100 ರೂಪಾಯಿ ಕ್ಯಾಶ್‌ಬ್ಯಾಕ್ ನೀಡುತ್ತಿದೆ.
ಎಲ್‌ಪಿಜಿ ಸಿಲಿಂಡರ್ ಕಾಯ್ದಿರಿಸಲು ಪೇಟಿಎಂ ಕೆಲವು ಷರತ್ತುಗಳನ್ನು ಹಾಕಿದೆ. ಕ್ಯಾಶ್‌ಬ್ಯಾಕ್ ಕೊಡುಗೆ ಮೊದಲ ಬಾರಿಗೆ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಸಿಗಲಿದೆ. ಎರಡನೆಯದಾಗಿ ಮಾರ್ಚ್ 31 ರವರೆಗೆ ಕೇವಲ ಒಂದು ಸಿಲಿಂಡರ್ ಮಾತ್ರ ಕಾಯ್ದಿರಿಸಬಹುದು. ಪಾವತಿಯ ನಂತರ ಸ್ಕ್ರ್ಯಾಚ್ ಕಾರ್ಡ್ ನ್ನು ಏಳು ದಿನಗಳಲ್ಲಿ ಸ್ಕ್ರಾಚ್ ಮಾಡಬೇಕು. ಇದ್ರಲ್ಲಿ ಗೆದ್ದ ಮೊತ್ತವನ್ನು 24 ಗಂಟೆಗಳ ಒಳಗೆ ಪೇಟಿಎಂ ವ್ಯಾಲೆಟ್ ಗೆ ಜಮಾ ಮಾಡಲಾಗುತ್ತದೆ. ಇಷ್ಟೇ ಅಲ್ಲ, ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ ಅಮೆಜಾನ್ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಅಮೆಜಾನ್ 50 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ನೀಡ್ತಿದೆ.