ಸರ್ಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಎಫ್ ಡಿ ಮೇಲೆ ಕಡಿಮೆ ಬಡ್ಡಿ ದರ ಸಿಗ್ತಿದೆ. ಈ ಸಂದರ್ಭದಲ್ಲಿ ಎಫ್ ಡಿ ಪಡೆಯುವ ಗ್ರಾಹಕರಿಗೆ ಕೆಲ ಬ್ಯಾಂಕ್ ಗಳು ವಿಶೇಷ ಸೌಲಭ್ಯಗಳನ್ನು ನೀಡ್ತಿವೆ. ಡಿಸಿಬಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಎಫ್ ಡಿ ಜೊತೆ ಆರೋಗ್ಯ ವಿಮೆಯ ಸೌಲಭ್ಯವನ್ನು ನೀಡುತ್ತಿವೆ.
ಎಫ್ ಡಿ ಪಡೆದ ಗ್ರಾಹಕರಿಗೆ ಬ್ಯಾಂಕ್ ಆರೋಗ್ಯ ವಿಮೆಯನ್ನು ನೀಡುತ್ತದೆ. ಅದಕ್ಕಾಗಿ ಬ್ಯಾಂಕ್ ಮತ್ತೊಂದು ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿವಿಧ ಬ್ಯಾಂಕುಗಳು ನೀಡುವ ಆರೋಗ್ಯ ವಿಮಾ ಪಾಲಿಸಿಯಲ್ಲಿ ವ್ಯತ್ಯಾಸವಿದೆ. ಡಿಸಿಬಿ ಬ್ಯಾಂಕ್ ತನ್ನ ಗ್ರಾಹಕರಿಗೆ ಆರೋಗ್ಯ ವಿಮೆಯನ್ನು ಒದಗಿಸಲು ಐಸಿಐಸಿಐ ಲೊಂಬಾರ್ಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಡಿಸಿಬಿ ಬ್ಯಾಂಕ್ ಎಫ್ ಡಿ ಪಡೆದ ಗ್ರಾಹಕರಿಗೆ 700 ದಿನಗಳ ಆರೋಗ್ಯ ವಿಮೆಯನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ 2 ವರ್ಷಗಳ ಕಾಲ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸುತ್ತಿದೆ.
ಹೆಚ್ಚಿನ ಬ್ಯಾಂಕುಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಮೊತ್ತದ ಎಫ್‌ಡಿ ಯಲ್ಲಿ ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಹೆಲ್ತ್ ಪ್ಲಸ್ ಪಾಲಿಸಿಗೆ ಡಿಸಿಬಿ ಬ್ಯಾಂಕ್ ಕನಿಷ್ಠ 10 ಸಾವಿರ ರೂಪಾಯಿಗಳ ಎಫ್ ಡಿ ಪಡೆಯುವುದು ಕಡ್ಡಾಯವಾಗಿದೆ. ಐಸಿಐಸಿಐ ಬ್ಯಾಂಕ್ 2 ರಿಂದ 3 ಲಕ್ಷ ರೂಪಾಯಿಗಳ ಎಫ್ ಡಿ ಯಲ್ಲಿ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸುತ್ತಿದೆ.
ಎಫ್‌ಡಿ ಯಲ್ಲಿ ಬ್ಯಾಂಕುಗಳು ಪಡೆದ ಆರೋಗ್ಯ ವಿಮೆಯ ಮೇಲೆ ಸೀಮಿತ ವ್ಯಾಪ್ತಿ ಇದೆ. ಗಂಭೀರ ಅನಾರೋಗ್ಯದ ಚಿಕಿತ್ಸೆಗಾಗಿ ಐಸಿಐಸಿಐ ಬ್ಯಾಂಕ್ ಗರಿಷ್ಠ 1 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ನೀಡುತ್ತಿದೆ.