ಬೆಂಗಳೂರು: ಉದ್ಯೋಗ ತೊರೆದ ನೌಕರರಿಗೆ ತಿಂಗಳಲ್ಲಿ ಗ್ರಾಚುಟಿ ಪಾವತಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಗ್ರಾಚುಟಿ ಹಣ ನೀಡಲು ಕಂಪನಿಗಳು ಸತಾಯಿಸಬಾರದು, ನೌಕರನೇ ಅರ್ಜಿ ಸಲ್ಲಿಸಬೇಕೆಂದು ನಿರೀಕ್ಷೆ ಮಾಡದೆ ಉದ್ಯೋಗ ತೊರೆದ 30 ದಿನಗಳ ಒಳಗೆ ಕಂಪನಿಯಿಂದಲೇ ಅವರಿಗೆ ಗ್ರಾಚುಟಿ ಮೊತ್ತವನ್ನು ಪಾವತಿಸಬೇಕು ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ಗ್ರಾಚುಟಿ ಹಣಕ್ಕಾಗಿ ನೌಕರರು ಅರ್ಜಿ ಸಲ್ಲಿಸಬೇಕಿಲ್ಲ ಎಂದು ಕೂಡ ತಿಳಿಸಲಾಗಿದೆ. ಗ್ರಾಚುಟಿ ವಿಳಂಬ ಮಾಡಿದ ಪ್ರಕರಣವೊಂದರಲ್ಲಿ ಬಡ್ಡಿ ನೀಡುವಂತೆ ನ್ಯಾಯಾಧಿಕರಣ ಆದೇಶ ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ವರ್ಮಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಐಬಿಸಿ ನಾಲೆಡ್ಜ್ ಪಾರ್ಕ್ ಸಲ್ಲಿಸಿದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಕುರಿತಾಗಿ ಆದೇಶ ಹೊರಡಿಸಿದೆ. ಗ್ರಾಚುಟಿಗಾಗಿ ನೌಕರರು ಅರ್ಜಿ ಹಾಕಬೇಕಿಲ್ಲ. ಉದ್ಯೋಗ ತೊರೆದ 30 ದಿನಗಳ ಒಳಗೆ ಸಂಸ್ಥೆಯಿಂದಲೇ ಗ್ರಾಚುಟಿ ಪಾವತಿಸಬೇಕೆಂದು ತಿಳಿಸಿದೆ.