ನವದೆಹಲಿ: ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ನೇಮಕಾತಿಯ ಮೂರನೇ ಸುತ್ತಿನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ಒಡಿಶಾ ಮತ್ತು ತಮಿಳುನಾಡು ಅಂಚೆ ವಲಯದಲ್ಲಿ 5 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಭಾರತೀಯ ಅಂಚೆ ಇಲಾಖೆ ಮಾಹಿತಿ ನೀಡಿದೆ.
ನೋಂದಣಿ ಪ್ರಕ್ರಿಯೆ ಎಲ್ಲವೂ ಹಿಂದಿನ ನೇಮಕಾತಿಯಂತೆಯೇ ಇರಲಿದ್ದು, ಸೆಪ್ಟೆಂಬರ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ತಿಳಿಸಲಾಗಿದೆ. 10 ನೇ ತರಗತಿಯಲ್ಲಿ ಉತ್ತೀರ್ಣರಾದವರು, ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲೀಷ್ ನಲ್ಲಿ ಉತ್ತೀರ್ಣ ಅಂಕಗಳನ್ನು ಪಡೆದಿರಬೇಕು. ಒಡಿಶಾ ಮತ್ತು ತಮಿಳುನಾಡಿನ ಅರ್ಜಿದಾರರು ಒಡಿಯಾ ಮತ್ತು ತಮಿಳು ಭಾಷೆ ಬಲ್ಲವರಾಗಿರಬೇಕು ಎಂದು ಹೇಳಲಾಗಿದೆ.
ಇದರೊಂದಿಗೆ ಅಭ್ಯರ್ಥಿಗಳು ಕನಿಷ್ಠ 60 ದಿನಗಳ ಅವಧಿಯ ಬೇಸಿಕ್ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು. ಸೈಕ್ಲಿಂಗ್ ಕಲಿತಿರಬೇಕು. ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಸವಾರಿ ಮಾಡುವುದನ್ನು ಕಲಿತಿದ್ದರೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.