ಅಂಚೆ ಕಚೇರಿ ಎಂದರೆ ಸಾಕು, ಹಣ ಉಳಿತಾಯಯ ಮತ್ತು ನಿಶ್ಚಿತ ಠೇವಣಿಗಳ ಭದ್ರತೆಯ ಭರವಸೆಯಾಗಿದೆ. ಸದ್ಯದ ಮಟ್ಟಿಗೆ ಹೆಚ್ಚು ಬಡ್ಡಿ ನೀಡಿ, ಇರಿಸಲಾಗಿರುವ ಹಣಕ್ಕೆ ಸುರಕ್ಷ ತೆ ಕೊಡುತ್ತಿರುವ ಭಾರತೀಯ ಅಂಚೆ ಇಲಾಖೆ ಮಾತ್ರವೇ ಎಂದರೆ ತಪ್ಪಿಲ್ಲ.
ಅಂಥದ್ದೇ ಒಂದು ಪೂರ್ಣ ಜೀವಿತ ಖಾತ್ರಿ ಯೋಜನೆ, ಅಂದರೆ 80 ವರ್ಷದವರೆಗೆ ಬದುಕಿದ್ದರೆ ಆ ವ್ಯಕ್ತಿಗೆ ಬೋನಸ್ ಹಣ ನೀಡುವ ಜೀವವಿಮೆ ಯೋಜನೆಯು ಅಂಚೆ ಇಲಾಖೆಯಲ್ಲಿದೆ. ಅದರ ಹೆಸರು ’ಗ್ರಾಮ ಸುರಕ್ಷಾ ಯೋಜನೆ’.
ಕನಿಷ್ಠ 10 ಸಾವಿರ ರೂ.ಗಳಿಂದ ಗರಿಷ್ಠ 10 ಲಕ್ಷ ರೂ.ವರೆಗೆ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ನಿವೃತ್ತ ಜೀವನದಲ್ಲಿ ಹಣದ ಭದ್ರತೆ ಬಯಸುವವರಿಗೆ ಈಗಿನಿಂದಲೇ ಹೂಡಿಕೆಗೆ ಉತ್ತಮ ಯೋಜನೆ ಇದು. ಒಂದು ವೇಳೆ 80 ವರ್ಷಕ್ಕೂ ಮುನ್ನ ಯೋಜನೆಯಲ್ಲಿ ಹೂಡಿಕೆ ಮಾಡಿರುವವರು ಮೃತರಾದರೆ, ಆಗ ಕಾನೂನು ಪ್ರಕಾರ ಅವರ ವಾರಸುದಾರರು ಅಥವಾ ನಾಮಿನೀಗೆ ಬೋನಸ್ ಸಮೇತ ಹೂಡಿಕೆಯು ಸಿಗುತ್ತದೆ.
ಭಾರತೀಯ ಪ್ರಜೆಯಾಗಿದ್ದು, 19 ವರ್ಷದಿಂದ 55 ವರ್ಷಗಳವರೆಗಿನವರು ಈ ಯೋಜನೆಯಲ್ಲಿ ಹೂಡಿಕೆಗೆ ಅರ್ಹರು. ಮಾಸಿಕ, ತ್ರೈಮಾಸಿಕ, ಆರು ತಿಂಗಳು ಅಥವಾ ವರ್ಷಕ್ಕೊಮೆ ನಿಯಮಿತವಾಗಿ ಪ್ರೀಮಿಯಂ ಪಾವತಿಗೆ ಅವಕಾಶವಿದೆ. ನಾಲ್ಕು ವರ್ಷಗಳ ಹೂಡಿಕೆ ಬಳಿಕ ಇದೇ ಯೋಜನೆ ಅಡಿಯಲ್ಲಿ ಸಾಲ ಕೂಡ ಪಡೆಯಬಹುದಾಗಿದೆ.
ಬಿಹಾರದ ಮತ್ತೊಬ್ಬ ರೈತನ ಖಾತೆಗೆ ಜಮೆಯಾಯ್ತು ಬರೋಬ್ಬರಿ 52 ಕೋಟಿ ರೂ.
ಕಳೆದ ಬಾರಿ ಈ ಯೋಜನೆ ಅಡಿಯಲ್ಲಿ ಇಲಾಖೆಯು ಬೋನಸ್ ರೂಪದಲ್ಲಿ ವಾರ್ಷಿಕ ಪ್ರತಿ 1 ಸಾವಿರ ರೂ. 65 ರೂ.ನಂತೆ ನೀಡಿತ್ತು. ಹೆಚ್ಚಿನ ಮಾಹಿತಿಗೆ www.postallifeinsurance.gov.in. ವೆಬ್ ಸೈಟ್‌ಗೆ ಭೇಟಿ ನೀಡಿರಿ.