ನವದೆಹಲಿ: ದೇಶದಲ್ಲಿ ಸ್ಥಗಿತಗೊಂಡಿರುವ ಹೌಸಿಂಗ್ ಪ್ರಾಜೆಕ್ಟ್ಗಳನ್ನ ಪೂರ್ಣಗೊಳಿಸಲು ಕೇಂದ್ರ ಸರ್ಕಾರ 250 ಬಿಲಿಯನ್ ರೂ. ಮೀಸಲಿಟ್ಟಿದೆ.
ಈ ಪ್ರಾಜೆಕ್ಟ್ನ ಮೊದಲ ಹಂತವು 2021 ರಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್ 1 ರಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಈ ನಿಧಿಯು ಸುಮಾರು 16 ಯೋಜನೆಗಳನ್ನ ಪೂರ್ಣಗೊಳಿಸುವ ಮೂಲಕ 4 ಸಾವಿರಕ್ಕೂ ಹೆಚ್ಚು ಮನೆಗಳನ್ನ ಹಸ್ತಾಂತರಿಸಲಿದೆ ಎಂದು ಎಸ್ಬಿಐಸಿಎಪಿ ವೆಂಚರ್ಸ್ ಲಿಮಿಟೆಡ್ನ ಮುಖ್ಯ ಹೂಡಿಕೆ ಅಧಿಕಾರಿ ಇರ್ಫಾನ್ ಎ ಕಾಜಿ ಮಾಹಿತಿ ನೀಡಿದ್ದಾರೆ.
ಕೈಗೆಟುಕುವ ದರದಲ್ಲಿ ಹಾಗೂ ಮಧ್ಯಮ ಆದಾಯದ ವಸತಿ ನಿರ್ಮಾಣ ಯೋಜನೆ ಪೂರ್ಣಗೊಳಿಸುವ ವಿಶೇಷ ಕಾರ್ಯಕ್ರಮವನ್ನ 2019ರಲ್ಲಿ ಘೋಷಣೆ ಮಾಡಲಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಸಾಲದ ಬಿಕ್ಕಟ್ಟಿನಿಂದಾಗಿ 63 ಶತಕೋಟಿ ಮೌಲ್ಯದ ಯೋಜನೆ ಸ್ಥಗಿತಗೊಂಡಿತ್ತು. ಬಿಲ್ಡರ್ಗಳಿಗೆ ಸಾಲವನ್ನ ಪೂರೈಸೋದು ಸಾಧ್ಯವಾಗಲಿಲ್ಲ. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಈ ಹಣಕಾಸಿನ ಸಮಸ್ಯೆಯನ್ನ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದು ಸ್ಥಗಿತಗೊಂಡಿದ್ದ ಕಾರ್ಯವನ್ನ ಪುನಾರಂಭಿಸುತ್ತಿದೆ.
ಸುಮಾರು 145 ಶತಕೋಟಿ ಮೌಲ್ಯದ ಹೂಡಿಕೆಯನ್ನೊಳಗೊಂಡ ಸುಮಾರು 159 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸುಮಾರು 1 ಲಕ್ಷ ಮನೆಗಳು ಪೂರ್ಣಗೊಳ್ಳಲಿವೆ. ಇದರಲ್ಲಿ 50 ಶತಕೋಟಿ ರೂಪಾಯಿ ಮೌಲ್ಯದ 49 ಯೋಜನೆಗಳು ಅಂತಿಮ ಹಂತದಲ್ಲಿದೆ. 112 ಯೋಜನೆಗಳು ಆರಂಭಿಕ ಹಂತದಲ್ಲಿವೆ. 2 ಯೋಜನೆಗಳು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಇರ್ಫಾನ್ ಎ ಕಾಜಿ ಮಾಹಿತಿ ನೀಡಿದ್ದಾರೆ.