ನವದೆಹಲಿ: ವಾರ್ಷಿಕ ತಲಾ 5 ಲಕ್ಷ ರೂಪಾಯಿ ಆರೋಗ್ಯ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಕಂತು 1500 ರೂ. ಗೆ ಏರಿಕೆ ಮಾಡುವ ಸಾಧ್ಯತೆಯಿದೆ.
10 ಕೋಟಿ ರೂ.ಗೂ ಅಧಿಕ ಬಡ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಜಗತ್ತಿನ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಇದಾಗಿದ್ದು, ಸುಮಾರು 50 ಕೋಟಿ ಯೋಜನೆಯ ಫಲಾನುಭವಿಗಳಿದ್ದಾರೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಪ್ರೀಮಿಯಂ ಪರಿಷ್ಕರಣೆ ಪ್ರಸ್ತಾವನೆ ಮಂಡಿಸಿದ್ದು, ಅನೇಕ ರಾಜ್ಯಗಳ ಪಾಲು 1052 ರೂ. ಮಾರ್ಗಸೂಚಿ ಮೊತ್ತ, ಕೇಂದ್ರ ಪಾಲು ಮೀರಿದ್ದು, ಈ ಕಾರಣದಿಂದ ಆಯುಷ್ಮಾನ್ ಭಾರತ್ ಯೋಜನೆ ಪ್ರೀಮಿಯಂ ಮೊತ್ತವನ್ನು 1052 ರೂ.ನಿಂದ 1500 ರೂ.ಗೆ ಏರಿಕೆ ಮಾಡಲಾಗುವುದು ಎನ್ನಲಾಗಿದೆ.