ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ನೂತನ ಪ್ರೈವೇಸಿ ನೀತಿಗಳ ಕುರಿತಾಗಿ ಗ್ರಾಹಕರು ಆತಂಕಗೊಂಡಿರುವ ಬೆನ್ನಲ್ಲೇ ವಿವಾದಿತ ನೀತಿಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ವಾಟ್ಸಾಪ್ ಸಿಇಓ ವಿಲ್ ಕ್ಯಾಥ್ ಕರ್ಟ್ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರ ಬರೆದು, ವಾಟ್ಸಾಪ್ ನ ಏಕಪಕ್ಷೀಯ ನೀತಿಗಳು ಖಂಡನೀಯ ಎಂದು ತಿಳಿಸಿದೆ. ಭಾರತೀಯ ಗ್ರಾಹಕರಿಗೆ ತೊಡಕಾಗುವಂತಹ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ. ಹೊಸ ನೀತಿಗೆ ಒಪ್ಪಿಕೊಳ್ಳದಿದ್ದರೆ ವಾಟ್ಸಾಪ್ ತೊರೆಯುವ ಬಗ್ಗೆ ತಿಳಿಸಿರುವುದನ್ನು ಕೇಂದ್ರ ಸರ್ಕಾರ ಖಂಡಿಸಿದೆ.
ವಾಟ್ಸಾಪ್ ಗೌಪ್ಯತಾ ನೀತಿಗಳಲ್ಲಿ ಮಾರ್ಪಾಟು ಮಾಡಿದ್ದು, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್ಬುಕ್ನಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕೆ ಒಪ್ಪಿಕೊಳ್ಳಲು ಗ್ರಾಹಕರಿಗೆ ಗಡುವು ನೀಡಿದ್ದು ಬಹುತೇಕ ಗ್ರಾಹಕರು ವಾಟ್ಸಾಪ್ ನಿಂದ ದೂರವಾಗತೊಡಗಿದ್ದಾರೆ.