ನವದೆಹಲಿ: ಅಡುಗೆ ಎಣ್ಣೆ ದರ ಇಳಿಕೆಗೆ ಕೇಂದ್ರ ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ. ದೇಶಿಯವಾಗಿ ಪೂರೈಕೆ ಹೆಚ್ಚಿಸಲು ಮತ್ತು ರಿಟೇಲ್ ಮಾರುಕಟ್ಟೆಯಲ್ಲಿ ದರ ಕಡಿಮೆ ಆಗುವಂತೆ ಮಾಡಲು ಸಂಸ್ಕರಿಸಿದ ತಾಳೆಎಣ್ಣೆ ಮೇಲಿನ ಆಮದು ಸುಂಕವನ್ನು 12.5 ಕ್ಕೆ ಇಳಿಕೆ ಮಾಡಲಾಗಿದೆ.
ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಮೂಲ ಆಮದು ಸುಂಕ ಶೇ. 17.5 ರಿಂದ ಶೇ. 12.5 ಕ್ಕೆ ಇಳಿಕೆ ಮಾಡಲಾಗಿದ್ದು, ಇಂದಿನಿಂದಲೇ ಸುಂಕ ಕಡಿತ ಅನ್ವಯವಾಗಲಿದ್ದು, 2022ರ ಮಾರ್ಚ್ ವರೆಗೂ ಜಾರಿಯಲ್ಲಿರುತ್ತದೆ.
ಆಮದು ಸುಂಕ ಇಳಿಕೆ ನಂತರ ಸಂಸ್ಕರಿಸಿದ ತಾಳೆ ಎಣ್ಣೆ ಮತ್ತು ಸಂಸ್ಕರಿಸಿದ ಪಾಮೊಲಿನ್ ಆಮದು ಸುಂಕ ಶೇಕಡ 19.25 ರಿಂದ ಶೇಕಡ 13.75 ಕ್ಕೆ ಇಳಿಕೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.
ಕಚ್ಚಾ ತಾಳೆ ಎಲೆ ಮೇಲೆ ಆಮದು ಸುಂಕ ಶೇಕಡ 8.5 ರಷ್ಟು ಇದೆ. ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಕಡಿಮೆ ಮಾಡಿರುವುದರಿಂದ ಸಂಸ್ಕರಿಸಿದ ಎಣ್ಣೆ ಆಮದು ಪ್ರಮಾಣ ಜಾಸ್ತಿಯಾಗುವ ಸಾಧ್ಯತೆಯಿದೆ. 2022ರ ಡಿಸೆಂಬರ್ ಅಂತ್ಯದವರೆಗೆ ಯಾವುದೇ ಪರವಾನಿಗೆ ಇಲ್ಲದೆ ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.