ನವದೆಹಲಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಓಡಿಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಸ್ತೆ ಸಾರಿಗೆ ಸಚಿವಾಲಯವು ಬ್ಯಾಟರಿ, ಮೆಥನಾಲ್ ಮತ್ತು ಎಥೆನಾಲ್‌ನಲ್ಲಿ ಚಲಿಸುವ ದ್ವಿಚಕ್ರ ವಾಹನಗಳಿಗೆ(ಇ -2 ಚಕ್ರಗಳು) ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದೆ.
ಈ ವಾಹನಗಳನ್ನು ಯಾವುದೇ ರೀತಿಯಲ್ಲಿ ಪರವಾನಗಿ ಇಲ್ಲದೆ ಬಳಸಬಹುದು, ಅಂದರೆ ಈ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಬಹುದು. ಈ ನಿರ್ಧಾರದಿಂದ ಪ್ರವಾಸೋದ್ಯಮ ಉದ್ಯಮಕ್ಕೆ ಅನುಕೂಲವಾಗಲಿದೆ. ಬ್ಯಾಟರಿ, ಮೆಥನಾಲ್ ಮತ್ತು ಎಥೆನಾಲ್‌ನಲ್ಲಿ ಚಲಿಸುವ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವವರಿಗೆ ರಸ್ತೆ ಸಾರಿಗೆ ಸಚಿವಾಲಯವು ಪರವಾನಿಗೆಗಳ ವಿನಾಯಿತಿ ನೀಡಿದೆ.
ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳಿಗೆ ಪರವಾನಿಗಿಗಳಿಂದ ವಿನಾಯಿತಿ ನೀಡಿದ್ದರೂ, ಆದೇಶವು ದ್ವಿಚಕ್ರ ವಾಹನಗಳಿಗೆ ಸ್ಪಷ್ಟ ಸೂಚನೆಗಳನ್ನು ಹೊಂದಿಲ್ಲವೆನ್ನಲಾಗಿದೆ. ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಕಾನೂನುಬದ್ಧವಾಗಿ ದ್ವಿಚಕ್ರ ವಾಹನಗಳನ್ನು ಪರವಾನಗಿ ಇಲ್ಲದೆ ಬಳಸಬಹುದು. ಇದರಿಂದ ಬಾಡಿಗೆಗೆ ದ್ವಿಚಕ್ರ ವಾಹನ ಸಾಗಿಸುವವರಿಗೆ ಅನುಕೂಲವಾಗಲಿದೆ.
ಈ ಬಗ್ಗೆ, ಬಸ್ ಮತ್ತು ಕಾರ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ(CMVR) ಅಧ್ಯಕ್ಷ ಗುರ್ಮೀತ್ ಸಿಂಗ್ ತನೇಜಾ ಅವರು ಹೇಳುವಂತೆ, ರಸ್ತೆ ಸಾರಿಗೆ ಸಚಿವಾಲಯದ ಈ ನಿರ್ಧಾರ ದ್ವಿಚಕ್ರ ವಾಹನಗಳಿಗೆ ಪರಿಹಾರ ನೀಡುತ್ತದೆ. ಪ್ರವಾಸಿ ಉದ್ಯಮಕ್ಕೆ ಸಂಬಂಧಿಸಿದ ಜನರು ಪ್ರಯೋಜನ ಪಡೆಯುತ್ತಾರೆ. ಗೋವಾ ಮತ್ತು ಇತರ ಪ್ರವಾಸೋದ್ಯಮ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲಾಗಿದೆ ಎಂಬುದನ್ನು ಗಮನಿಸಬಹುದಾಗಿದೆ.