ನವದೆಹಲಿ: ತೈಲದ ಜಾಗತಿಕ ಬೆಲೆಗಳು ಕಡಿಮೆಯಾಗುತ್ತಿದ್ದಂತೆ ದೇಶೀಯ ತೈಲ ಉತ್ಪಾದಕರ ಮೇಲೆ ವಿಂಡ್ ಫಾಲ್ ತೆರಿಗೆಯನ್ನು ಸರ್ಕಾರ ಕಡಿಮೆ ಮಾಡಿದೆ.
ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲ, ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನಗಳ ರಫ್ತು(ಎಟಿಎಫ್) ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಸರ್ಕಾರ ಬುಧವಾರ ಕಡಿಮೆ ಮಾಡಿದೆ. ಅಂತರರಾಷ್ಟ್ರೀಯ ತೈಲ ಬೆಲೆಗಳು ಮೃದುವಾಗಿರುವುದರಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹಿಂತೆಗೆದುಕೊಂಡಿದೆ. ಆದರೆ ಗ್ರಾಹಕರಿಗೆ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ.
ವಿವಿಧ ಪೆಟ್ರೋಲಿಯಂ ವಸ್ತುಗಳ ವಿಂಡ್ ಫಾಲ್ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಿ ಮಂಗಳವಾರ ತಡರಾತ್ರಿ ಸರ್ಕಾರಿ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯ ಪ್ರಕಾರ, ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಬುಧವಾರದಿಂದ ಪ್ರತಿ ಟನ್‌ಗೆ 23,250 ರೂ. ನಿಂದ 17,000 ರೂ.ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ರಫ್ತು ಸುಂಕವಾಗಿ ವಿಧಿಸಲಾಗಿದ್ದ ಸುಂಕವನ್ನು ಲೀಟರ್ ಗೆ 13 ರೂ.ನಿಂದ 10 ರೂ.ಗೆ ಮತ್ತು ಎಟಿಎಫ್ ಲೀಟರ್ ಗೆ 6 ರೂ.ನಿಂದ 4 ರೂ.ಗೆ ಇಳಿಸಲಾಗಿದೆ. ಪೆಟ್ರೋಲ್ ರಫ್ತಿಗೆ ತೆರಿಗೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ.