alex Certify ಭವಿಷ್ಯನಿಧಿ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭವಿಷ್ಯನಿಧಿ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್

 ನವದೆಹಲಿ: ಭವಿಷ್ಯ ನಿಧಿಯಲ್ಲಿ ಠೇವಣಿ ಮಿತಿಯನ್ನು ವಾರ್ಷಿಕ 5 ಲಕ್ಷ ರೂಪಾಯಿಗೆ ಸರ್ಕಾರ ಹೆಚ್ಚಳ ಮಾಡಿದೆ. ನಿವೃತ್ತಿ ನಿಧಿಗೆ ಉದ್ಯೋಗದಾತರು ಯಾವುದೇ ಕೊಡುಗೆ ನೀಡದ ಸಂದರ್ಭದಲ್ಲಿ ಇದು ಅನ್ವಯವಾಗಲಿದೆ.

ಕಳೆದ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಭವಿಷ್ಯ ನಿಧಿಗೆ ನೌಕರರ ಕೊಡುಗೆಗಳ ಮೇಲಿನ ಬಡ್ಡಿಯನ್ನು ವಾರ್ಷಿಕ 2.5 ಲಕ್ಷ ರೂ. ಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಏಪ್ರಿಲ್ 1 ರಿಂದ ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ 2021ರ ಚರ್ಚೆ ಮೇಲೆ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, ಉದ್ಯೋಗದಾತರು ಭವಿಷ್ಯ ನಿಧಿಗೆ ನೀಡದಿರುವ ಪ್ರಕರಣಗಳಲ್ಲಿ ಈ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

2021 -22ರ ತೆರಿಗೆ ಪ್ರಸ್ತಾಪಗಳನ್ನು ಜಾರಿಗೆ ತರುವ ಹಣಕಾಸು ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಗಿದೆ. ಭವಿಷ್ಯ ನಿಧಿ ಕೊಡುಗೆಯ ಮೇಲಿನ ಬಡ್ಡಿ ಮೇಲಿನ ತೆರಿಗೆ ಕೇವಲ ಶೇಕಡ 1 ರಷ್ಟು ಕೊಡುಗೆದಾರರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಉಳಿದವರ ಕೊಡುಗೆ ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಇರುವುದರಿಂದ ಪರಿಣಾಮ ಬೀರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...