ನವದೆಹಲಿ: 2024 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಅನ್ವಯವಾಗುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಡಿಸೆಂಬರ್ 29, 2023 ರ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ ಮಾರ್ಚ್ 31, 2024 ರಂತೆ, ಆಯ್ದ ಸಣ್ಣ ಉಳಿತಾಯ ಯೋಜನೆಗಳು ಮತ್ತು ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿದರಗಳಲ್ಲಿ ಹೆಚ್ಚಳ ಮಾಡಲಾಗಿದೆ.
ಸಾರ್ವಜನಿಕ ಭವಿಷ್ಯ ನಿಧಿಯ(PPF) ಬಡ್ಡಿ ದರವು 7.1 ಶೇಕಡಾದಲ್ಲಿ ಸ್ಥಿರವಾಗಿರುತ್ತದೆ.
ಸುಕನ್ಯಾ ಸಮೃದ್ಧಿ ಖಾತೆ ಯೋಜನೆಗೆ ಬಡ್ಡಿದರದಲ್ಲಿ 20 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳ ಮಾಡಲಾಗಿದೆ. ಜನವರಿ-ಮಾರ್ಚ್ 2024 ರ ಅವಧಿಗೆ ಶೇ. 8.2 ಬಡ್ಡಿದರ ಇರಲಿದೆ, ಎಲ್ಲಾ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ನೀಡಲಾದ ದರಗಳಿಗಿಂತ ಬದಲಾಗದೆ ಉಳಿಯುತ್ತವೆ.