ನವದೆಹಲಿ: ಬೆಲೆ ಏರಿಕೆ ತಡೆಯಲು ಗೋಧಿ ಹಿಟ್ಟು ರಫ್ತು ಮಾಡಲು ಸರ್ಕಾರ ಕಡಿವಾಣ ಹಾಕಿದೆ. ಗೋಧಿ ಹಿಟ್ಟು ರಫ್ತು ನಿಷೇಧಿಸಲಾಗಿದೆ.
ಏರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಗೋಧಿ ಹಿಟ್ಟು(ಆಟಾ), ಮೈದಾ ಮತ್ತು ರವೆ ರಫ್ತುಗಳನ್ನು ನಿರ್ಬಂಧಿಸಲು ಸರ್ಕಾರ ನಿರ್ಧರಿಸಿದೆ. ಮೇ ತಿಂಗಳಲ್ಲಿ ಸರ್ಕಾರ ಗೋಧಿ ರಫ್ತು ನಿಷೇಧಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಸರಕುಗಳ ರಫ್ತುದಾರರು ಜುಲೈ 12 ರಿಂದ ಸಾಗಣೆಗೆ ಅಂತರ ಸಚಿವಾಲಯದ ಸಮಿತಿಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
ಗೋಧಿ ಹಿಟ್ಟಿನ ರಫ್ತು ನೀತಿ ಮುಕ್ತವಾಗಿಯೇ ಇದೆ. ಆದರೆ, ಅಂತರಸಚಿವಾಲಯ ಸಮಿತಿಯ ಶಿಫಾರಸಿಗೆ ಒಳಪಟ್ಟಿರುತ್ತದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ(DGFT) ಅಧಿಸೂಚನೆಯಲ್ಲಿ ತಿಳಿಸಿದೆ.
ಹೊಸ ಅನುಮೋದನೆಯು ಗೋಧಿ ಹಿಟ್ಟು(ಅಟ್ಟ), ಮೈದಾ, ರವೆ(ರವಾ/ ಸಿರ್ಗಿ), ಅಟ್ಟಾಗಳಿಗೆ ಅನ್ವಯಿಸುತ್ತದೆ. ಅಧಿಸೂಚನೆಯ ಪ್ರಕಾರ, ಗೋಧಿ ಹಿಟ್ಟಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅಗತ್ಯ ವಿಧಾನಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎನ್ನಲಾಗಿದೆ.