ಕೇಂದ್ರ ಬಜೆಟ್ 2021-22ರಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ಗಳ ದರವನ್ನ ಏರಿಕೆ ಮಾಡಲಾಗಿದೆ. ಹಾಗೂ ಈ ಪರಿಷ್ಕೃತ ದರವು ಮೂರ್ನಾಲ್ಕು ದಿನಗಳೊಳಗಾಗಿ ಜಾರಿಗೆ ಬರಲಿದೆ.
ಪ್ರತಿ ಲೀಟರ್ ಪೆಟ್ರೋಲ್ ದರ 2.5 ರೂಪಾಯಿ ಹಾಗೂ ಡಿಸೇಲ್ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆ ಮಾಡಲಾಗಿದೆ.
ಕೃಷಿ ಸೆಸ್ಗಳ ಅಡಿಯಲ್ಲಿ ಈ ಪೆಟ್ರೋಲ್ ಹಾಗೂ ಡಿಸೇಲ್ಗಳ ದರ ಏರಿಕೆಯಾಗಿದೆ.
ಈ ಏರಿಕೆಯಾದ ಹಣದಿಂದ ಸಂಗ್ರಹವಾದ ಆದಾಯವು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಳಕೆಯಾಗಲಿದೆ.
ಸ್ಕ್ರ್ಯಾಪ್ ನೀತಿ ಎಂದ್ರೇನು….? ಜನ ಸಾಮಾನ್ಯರ ಮೇಲೆ ಹೇಗೆ ಪ್ರಭಾವ ಬೀರಲಿದೆ ಸ್ಕ್ರ್ಯಾಪ್ ನೀತಿ
ಇನ್ನುಳಿದಂತೆ ವಿದೇಶಿ ಮದ್ಯದ ಮೇಲೂ ಶೇ.100 ರಷ್ಟು ಕೃಷಿ ಸೆಸ್ ವಿಧಿಸಲಾಗಿದೆ. ರಾಸಾಯನಿಕ ಗೊಬ್ಬರ ಹಾಗೂ ಯೂರಿಯಾಗಳ ಮೇಲೆ ಶೇಕಡಾ 5ರಷ್ಟು ಸೆಸ್, ಪಾಮ್ ಆಯಿಲ್ ಮೇಲೆ ಶೇ.17.5 ರಷ್ಟು ಕೃಷಿ ಸೆಸ್, ಸನ್ ಫ್ಲವರ್ ಹಾಗೂ ಸೋಯಾಬಿನ್ ಎಣ್ಣೆಯ ಮೇಲೆ ಶೇ.20 ರಷ್ಟು ಕೃಷಿ ಸೆಸ್, ಚಿನ್ನ ಬೆಳ್ಳಿಯ ಮೇಲೂ 2.5 ಶೇ. ಕೃಷಿ ಸೆಸ್ ವಿಧಿಸಲಾಗಿದೆ. ಇದು ಮಾತ್ರವಲ್ಲದೇ ಬೇಳೆಕಾಳುಗಳ ಮೇಲೂ ಕೃಷಿ ಸೆಸ್ ಹಾಕಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಈ ಸೆಸ್ಗಳು ಜಾರಿಗೆ ಬರಲಿದೆ.